ಪುತ್ತೂರು: ಕುಂಬ್ರ ವರ್ತಕರ ಸಂಘದ 20 ನೇ ವರ್ಷಾಚರಣೆಯ ಪ್ರಯುಕ್ತ ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್‌ನವರು ಕೊಡುಗೆಯಾಗಿ ಕೊಡಮಾಡಿದ ಪೊರ್ಲುದ ಕುಂಬ್ರ ‘ಸೆಲ್ಫೀ ಪಾಯಿಂಟ್’ ಅನ್ನು ಕುಂಬ್ರ ಕೆಪಿಎಸ್ ಶಾಲಾ ವಿದ್ಯಾರ್ಥಿಗಳು ನ.21 ರಂದು ವೀಕ್ಷಣೆ ಮಾಡಿದರು.
ಒಳಮೊಗ್ರು ಗ್ರಾ.ಪಂ ವತಿಯಿಂದ ವಿದ್ಯಾರ್ಥಿಗಳನ್ನು ಸೆಲ್ಫೀ ಪಾಯಿಂಟ್ ಬಳಿಗೆ ಕರೆದುಕೊಂಡು ಬಂದು ಅಲ್ಲಿ ಹಾಕಲಾಗಿರುವ ಕುಂಬ್ರದ ಬಗ್ಗೆ ಇರುವ ಇತಿಹಾಸವನ್ನು ಚರಿತ್ರೆ ಬೋರ್ಡ್‌ಗಳನ್ನು ತೋರಿಸಲಾಯಿತು. ಇದಲ್ಲದೆ ಬ್ರಿಟೀಷರ ಕಾಲದಲ್ಲಿ ಎತ್ತಿನ ಗಾಡಿಗಳ ತಂಗುದಾಣವಾಗಿದ್ದ ಕುಂಬ್ರ ಪೇಟೆಯ ನೆನಪನ್ನು ಮರುಕಳಿಸುವಂತೆ ಇಲ್ಲಿ ಇಡಲಾಗಿರುವ ಎತ್ತಿನ ಗಾಡಿಯ ಬಗ್ಗೆಯೂ ತಿಳಿಸಿ ಹೇಳಲಾಯಿತು.
ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶಾರದಾ, ಶಿಕ್ಷಕರುಗಳಾದ ನಝೀರ್, ಪ್ರತಿಮಾ, ಗ್ರಂಥ ಪಾಲಕಿ ಸಿರಿನಾ ಉಪಸ್ಥಿತರಿದ್ದರು.