ಫಿಲೋಮಿನಾ ಪ.ಪೂ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಕೈಗಾರಿಕಾ ಘಟಕಕ್ಕೆ ಭೇಟಿ

0

ಪುತ್ತೂರು : ಪುರುಷರಕಟ್ಟೆಯಲ್ಲಿರುವ ಪ್ರತಿಷ್ಠಿತ ಬಿಂದು ಪ್ಯಾಕ್ಟರಿ ಮತ್ತು ನಿತ್ಯ ಆಹಾರ ಉತ್ಪನ್ನ ಘಟಕಕ್ಕೆ ನ.23 ರಂದು ಸಂತ ಫಿಲೋಮಿನಾ ಪ. ಪೂ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿದರು.

ಅವರನ್ನು ಸಂಸ್ಥೆಯ ಮ್ಯಾನೇಜರ್ ಆಗಿರುವ ಸುರೇಶ್ ಭಟ್ ಸ್ವಾಗತಿಸಿ, ಮಾತನಾಡಿ ಬಿಂದು ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ಪಿಝ್ ಜೀರಾ ಮಸಾಲ, ಸಿಪ್ ಆನ್ ಉತ್ಪನ್ನಗಳ ಮೂಲಕ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಅಧಿಪತ್ಯ ಹೊಂದಿರುವ ಬಿಂದು ಕಂಪನಿ ಸ್ಟಾಕ್ ಅಪ್ ಉತ್ತನಗಳ ಕುರಿತು ಮಾಹಿತಿಯನ್ನು ನೀಡಿದರು.

ಪ್ರತಿಷ್ಠಿತ ಎಸ್‌.ಜಿ ಕಾರ್ಪರೇಟ್ಸ್ ಸಂಸ್ಥೆಯ ಎಂ.ಡಿ ಸತ್ಯಶಂಕರ್ ಭಟ್ ರವರು ಗ್ರಾಮೀಣ ಕನ್ನಡಿಗರಿಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನೀಡಿದ್ದಾರೆ. ಎಸ್‌.ಜಿ ಗ್ರೂಪ್‌ ಕಂಪನಿಗಳಲ್ಲಿ 2,000 ಮಂದಿ ನೇರ ಉದ್ಯೋಗದಲ್ಲಿದ್ದರೆ, 10,000ಕ್ಕೂ ಅಧಿಕ ಮಂದಿ ಪರೋಕ್ಷ ಉದ್ಯೋಗ ಪಡೆದಿದ್ದಾರೆ ಎಂದು ಹೇಳಿದರು.

ಆಹಾರ ಉತ್ಪನ್ನ ಘಟಕ ‘ನಿತ್ಯ’ ಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡರು. ಮ್ಯಾನೇಜರ್ ರಾಧಾಕೃಷ್ಣಗೌಡರು ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here