ಪುತ್ತೂರು: ಬಿಜೆಪಿ ಅರ್ಯಾಪು ನಗರ ಮಂಡಲದ ಬೂತ್ 115ರ ಅಧ್ಯಕ್ಷರಾಗಿ ಉಮೇಶ್ ಆಚಾರ್ಯ ಕುಕ್ಕಾಡಿ ಹಾಗೂ ಕಾರ್ಯದರ್ಶಿಯಾಗಿ ಗಣೇಶ ಕುಕ್ಕಾಡಿ ಆಯ್ಕೆಯಾಗಿದ್ದಾರೆ.
ಸಂಪ್ಯ ಉದಯಗಿರಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಡಿ.3ರಂದು ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ವಿನ್ನರ್ ರಮೇಶ್ ಪ್ರಭು, ಮೋಹನ್ ಸಿಂಹವನ, ಕೇಶವ ಗೌಡ, ಮೋಹನ್ ನಾಯಕ್, ಲತಾ ಎಸ್ ಕುಲಾಲ್, ಗಿರಿಜಾ ಬಾಬು ಸಾಲಿಯಾನ್, ವಿಶ್ವನಾಥ್, ವಸಂತ, ಲಿಂಗಪ್ಪ ಶೆಟ್ಟಿ, ತಿಮ್ಮಪ್ಪ ಅಚ್ಚುತ, ಆಚಾರ್ಯ ಮೂಲ ಚಂದ್ರ ನಾಯಕ್, ವೇದಾವತಿ, ಜಯಂತಿ ಭರತ್ ಕುಕ್ಕಾಡಿ, ಭಾಸ್ಕರ್ ಕುಕ್ಕಾಡಿ, ಜಯಲಕ್ಶ್ಮೀ, ಸತೀಶ್ ಕುಲಾಲ್ ಉದಯಗಿರಿಯವರನ್ನು ಆಯ್ಕೆ ಮಾಡಲಾಯಿತು.
ದ.ಕ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಉಪಾಧ್ಯಕ್ಷ ಯುವರಾಜ ಪೆರಿಯತ್ತೋಡಿ, ಮಹಾ ಶಕ್ತಿ ಕೇಂದ್ರದ ಪ್ರಮುಖ್ ದೀಕ್ಷಾ ಪೈ, ನಗರ ಸಭೆಯ ಉಪಾಧ್ಯಕ್ಷ ಬಾಲಚಂದ್ರ ಮರೀಲ್, ಸದಸ್ಯ ಶೀನಪ್ಪ ನಾಯ್ಕ, ಶಕ್ತಿ ಕೇಂದ್ರದ ಪ್ರಮುಖ್ ಸಂತೋಷ್ ಕುಮಾರ್ ಮುಕ್ರಂಪಾಡಿ ನಗರ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.