ಪುತ್ತೂರು,ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

0

ಪುತ್ತೂರು: ಪುತ್ತೂರು ಹಾಗೂ ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆಯು ಮಿನಿ ಸಭಾಂಗಣದಲ್ಲಿ ಡಿ.5ರಂದು ನಡೆಯಿತು.ವಿಕಲಚೇತನರ ನೋಡೆಲ್ ಅಧಿಕಾರಿ ವಾಣಿಶ್ರೀ ಅಧ್ಯಕ್ಷತೆ ವಹಿಸಿದ್ದರು.

ರೋಟರಿಯಟ್ ಕ್ಲಬ್ ನ ಅಧ್ಯಕ್ಷ, ಮಾಜಿ ವಿಕಲ ಚೇತನರ ಪುನರ್ವಸತಿ ಕೇಂದ್ರದ ನೋಡೆಲ್ ಅಧಿಕಾರಿ ಸುಬ್ರಮಣಿ ಪಿ. ವಿ ಅತಿಥಿಯಾಗಿ ಭಾಗವಹಿಸಿ ಡಿಸೆಂಬರ್ 7ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆಯುವ ಕೃತಕ ಕಾಲು ಜೋಡಣೆ ತಪಾಸಣೆ ಶಿಬಿರದ ಬಗ್ಗೆ ಮಾಹಿತಿ ನೀಡಿದರು.

ಪುತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಡಿಸೆಂಬರ್ 17ರಂದು ಪುತ್ತೂರು ತಾಲ್ಲೂಕು ಮಟ್ಟದ ವಿಕಲ ಚೇತನರ ದಿನಾಚರಣೆಯ ಕಾರ್ಯಕ್ರಮವನ್ನು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲ್ಲಾಖೆ ವಿಕಲ ಚೇತನರ ಸೇವಾ ಕೇಂದ್ರ ಕಚೇರಿ ಪುತ್ತೂರು ತಾಲ್ಲೂಕು ಪಂಚಾಯತ್, ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರ ಸಹಯೋಗ, ರೋಟರಿಯೇಟ್ ಸಂಘ ಸಂಸ್ಥೆಗಳ ನೆರವುನೊಂದಿಗೆ ಪುತ್ತೂರು ನೆಹರು ನಗರದ ಶಿವ ಸದನ ವಿಶೇಷ ಮಕ್ಕಳಶಾಲೆಯಲ್ಲಿ ಆಚರಣೆ ಮಾಡುವ ಬಗ್ಗೆ ಸಲಹೆ, ಸೂಚನೆ ನೀಡಿದರು.

ಪುತ್ತೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಜಯ ಪ್ರಕಾಶ್ ರವರು ಡಿಸೆಂಬರ್ 19ರಂದು ವಿಧಾನ ಸಭೆ ಅಧಿವೇಶನದಲ್ಲಿ ಚುಕ್ಕಿ ಪ್ರಶ್ನೆ ಬಗ್ಗೆ, ಗ್ರಾಮ ಪಂಚಾಯತ್ ಗಳಲ್ಲಿ ವಿಕಲ ಚೇತನರ ಮಾಹಿತಿ ಇಟ್ಟುಕೊಳ್ಳುವ ಕುರಿತು, ವಿಕಲಚೇತನರಿಗೇ 5% ಅನುದಾನದಲ್ಲಿ ಸಿಕ್ಕಿದ ಮಾಹಿತಿಯ ಕಡತ ಇಟ್ಟುಕೊಳ್ಳುವ ಕುರಿತು, ವಿಕಲ ಚೇತನರ ಹೊಸ ಸೇರ್ಪಡೆ, ವಲಸೆ ಮಾಹಿತಿ ಸಂಗ್ರಹಣೆ, ಗ್ರಾಮ ಪಂಚಾಯತ್ ಗಳಲ್ಲಿ ವಿಕಲ ಚೇತನರ ಇಲಾಖೆ ಯೋಜನೆಗಳ ಮಾಹಿತಿಯನ್ನು ನೋಟೀಸ್ ಬೋರ್ಡ್ ಗಳಲ್ಲಿ ಆಂಟಿಸುವ ಬಗ್ಗೆ ,ವಿಕಲ ಚೇತನರ ಇಲಾಖೆ ಕರ್ತವ್ಯಗಳ ಮಾಹಿತಿ ನೀಡಿದರು.

ಪುತ್ತೂರು ಗ್ರಾಮೀಣ ಹಾಗೂ ಪುನರ್ ವಸತಿ ಕಾರ್ಯಕರ್ತರ ಸಲಹಾ ಸಮಿತಿ ಸದಸ್ಯರಾಗಿ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಪವಿತ್ರ ,ಒಳಮೊಗ್ರು ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಮೋಹನ್ ಕೆ. ಪಿ ಹಾಗೂ ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರ ಸಲಹ ಸಮಿತಿ ಸದಸ್ಯರಾಗಿ ಸುಬ್ರಮಣ್ಯ ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ದಿವ್ಯ, ಹಾಗೂ ಐತ್ತೂರು ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಸಂತೋಷ್ ರನ್ನು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಜಯ ಪ್ರಕಾಶ್ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಮಟ್ಟದ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ,ಪುತ್ತೂರು ಹಾಗೂ ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು. ಪುತ್ತೂರು ತಾಲ್ಲೂಕು ಪಂಚಾಯತ್ ಬಹು ಮಟ್ಟದ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here