ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಪೆರ್ನೆ ವಲಯದ ಪೆರ್ನೆ ಬಿಳಿಯೂರು ಕಾರ್ಯಕ್ಷೇತ್ರದ “ಆದಿ ಮಾಯೆ ತೋಟ” ಪ್ರಗತಿಬಂಧು ಸಂಘಕ್ಕೆ ಯೋಜನೆಯಿಂದ ಮಂಜೂರಾಗಿರುವ ಲಾಭಾಂಶವನ್ನು ತಾಲೂಕಿನ ಯೋಜನಾಧಿಕಾರಿಗಳಾದ ರಮೇಶ್ ರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಗೋಪಾಲ ಸಪಲ್ಯ, ವಲಯ ಮೇಲ್ವಿಚಾರಕರಾದ ಶಾರದಾ, ಸೇವಾಪ್ರತಿನಿಧಿ ಜಯಶ್ರೀ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.