ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ದಶಮಾನೋತ್ಸವ : ಕೊಣಾಜೆ ಗ್ರಾಮದ ಮಾದರಿ ದಂಪತಿಗೆ ಸನ್ಮಾನ

0

ನೆಲ್ಯಾಡಿ: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕಡಬ ತಾಲೂಕಿನ ಕೊಣಾಜೆ ಗ್ರಾಮದಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಆರು ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಕಾಯರ್‌ಮುಗೇರು ಪರಾರಿ ವೀರಪ್ಪಗೌಡರ ಮನೆಯಲ್ಲಿ ನಡೆಯಿತು.


ಒಕ್ಕೂಟದ ಅಧ್ಯಕ್ಷ ಚೆನ್ನಪ್ಪ ಗೌಡ ಕೆಳಗಿನ ಮನೆ ಅಧ್ಯಕ್ಷತೆ ವಹಿಸಿದ್ದರು. ಊರ ಗೌಡರಾದ ಪದ್ಮನಾಭ ಗೌಡ ಬನಾರಿ ದೀಪ ಪ್ರಜ್ವಲಿಸಿದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ದಂಪತಿಗಳನ್ನು ಸನ್ಮಾನಿಸಿ ಶುಭಹಾರೈಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ ಗೌಡ, ಸ್ಥಾಪಕಾಧ್ಯಕ್ಷ ಎ.ವಿ.ನಾರಾಯಣ ಗೌಡ ಸಂದರ್ಭೋಚಿತವಾಗಿ ಮಾತನಾಡಿದರು. ವಲಯ ನಿರ್ದೇಶಕ ರವಿಚಂದ್ರ ಗೌಡ ಪ್ರಾಸ್ತಾಕವಾಗಿ ಮಾತನಾಡಿದರು.

೫೦ ವರ್ಷ ದಾಂಪತ್ಯ ಜೀವನ ಪೂರ್ಣಗೊಳಿಸಿದ ಮಾದರಿ ದಂಪತಿಗಳಾದ ವೀರಪ್ಪ ಗೌಡ-ಯಮುನಾ ಕಾಯರ್‌ಮುಗೇರು ಪರಾರಿ, ನಾರ್ಣಪ್ಪ ಗೌಡ-ಜಾನಕಿ ಕೆಳಗಿನ ಮನೆ, ಅಣ್ಣುಗೌಡ-ಡೀಕಮ್ಮ ಬರೆಮೇಲು, ಮೋನಪ್ಪ ಗೌಡ-ಅಕ್ಕಮ್ಮ ಅಲ್ನಟ, ಪೂವಪ್ಪ ಗೌಡ-ಮೋನಕ್ಕ ಕಣಿಯ, ಸುಂದರ ಗೌಡ-ಜಾನಕಿ ವಳಚ್ಚಿಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿರುವ ಕೊಣಾಜೆ ಗ್ರಾಮದ ದೊಡ್ಡಮನೆ ಭಾಸ್ಕರ ಗೌಡರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸುರೇಶ ಗೌಡ ಪಡಿಪಂಡ ಸನ್ಮಾನಿತ ದಂಪತಿಗಳನ್ನು ಮಾತನಾಡಿಸಿ 50 ವರ್ಷಗಳ ಹಿಂದೆ ಮದುವೆಯ ಸಂದರ್ಭದಲ್ಲಿ ನಡೆಯುತ್ತಿದ್ದ ರೀತಿ ರಿವಾಜುಗಳ ಬಗ್ಗೆ ಮಾಹಿತಿಯನ್ನು ಸನ್ಮಾನಿತರಿಂದಲೇ ಪಡೆದು, ಹಿಂದಿನ ಕಾಲದ ಆಚಾರ ವಿಚಾರಗಳನ್ನು ಇಂದಿನ ಯುವ ಸಮಾಜ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ತಿಳಿಸಿದರು.

ಬಹುಮಾನ ವಿತರಣೆ:
ದಶಮಾನೋತ್ಸವ ಸಲುವಾಗಿ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ಆನ್‌ಲೈನ್ ಸ್ಪರ್ಧೆಯಲ್ಲಿ ವಿಜೇತರಾದ ಪುತ್ತಿಗೆ ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ಸಮೃದ್ಧಿ ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯರಿಗೆ ಬಹುಮಾನದ ಚೆಕ್ ಅನ್ನು ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ ಗೌಡ ವಿತರಿಸಿದರು.

ಒಕ್ಕಲಿಗ ಗೌಡ ಗ್ರಾಮ ಸಮಿತಿಯವರು, ಯುವಸಂಘದ ಪದಾಧಿಕಾರಿಗಳು, ಮಹಿಳಾ ಸಂಘದವರು, ಒಕ್ಕೂಟದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೈತ್ರಿ ಕೆಳಗಿನ ಮನೆ ಸ್ವಾಗತಿಸಿದರು. ವಲಯದ ಪ್ರೇರಕ ಪರಮೇಶ್ವರ ಗೌಡ ಕೊಂಬಾರು ವಂದಿಸಿದರು. ಸಮೃದ್ಧಿ ಸಂಘದ ಸದಸ್ಯರು ಪ್ರಾರ್ಥಿಸಿದರು. ಭಾರತಿ ಬನಾರಿ ಚಿಂತನ ವಾಚಿಸಿದರು. ಮೇಲ್ವಿಚಾರಕ ವಿಜಯಕುಮಾರ್ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.

LEAVE A REPLY

Please enter your comment!
Please enter your name here