ನಾಳೆ(ಡಿ.17) ಕುಂಬ್ರದಲ್ಲಿ ತಾಜುಲ್ ಉಲಮಾ ಹಾಗೂ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ, ಬುರ್ಧಾ ಮಜ್ಲಿಸ್, ನಅತೇ ಶರೀಫ್
ಪುತ್ತೂರು: ಮಿಸ್ಬಾಹುಸ್ಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ, ಕುಂಬ್ರ ಇದರ 10ನೇ ವಾರ್ಷಿಕೋತ್ಸವ ಮತ್ತು ತಾಜುಲ್ ಉಲಮಾ ಹಾಗೂ ಇನ್ನಿತರ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬುರ್ಧಾ ಮಜ್ಲಿಸ್ ಹಾಗೂ ನಅತೇ ಶರೀಫ್ ಡಿ.17ರಂದು ಕುಂಬ್ರ ಜಂಕ್ಷನ್ ಬಳಿ ನಡೆಯಲಿದೆ.
ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ದುವಾ ಮತ್ತು ನೇತೃತ್ವ ನೀಡಲಿದ್ದು, ಎಸ್.ಎಂ ಬಶೀರ್ ಹಾಜಿ ಶೇಖಮಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಶೇಖಮಲೆ ಜುಮಾ ಮಸೀದಿಯ ಮುದರ್ರಿಸ್ ಬದ್ರುದ್ದೀನ್ ಅಹ್ಸನಿ ಉದ್ಘಾಟಿಸಲಿದ್ದು, ಮೈದಾನಿಮೂಲೆ ಜುಮಾ ಮಸೀದಿ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಸ್ವಾದಿಖ್ ಫಾಳಿಲಿ ಗೂಡಲ್ಲೂರು ಮತ್ತು ತಂಡದವರಿಂದ ಬುರ್ಧಾ ಆಲಾಪನೆ ನಡೆಯಲಿದ್ದು, ಮುಈನುದ್ದೀನ್ ಬೆಂಗಳೂರು ಅವರಿಂದ ನಅತೇ ಶರೀಫ್ ಆಲಾಪನೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.