ಪುತ್ತೂರು: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಡಿ.25ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವರವರ ನೇತೃತ್ವದಲ್ಲಿ ಪುತ್ತೂರಿನ ವಿವಿಧ ಚರ್ಚ್‌ಳಿಗೆ ಭೇಟಿ ನೀಡಿ ಶುಭಾಶಯ ಸಲ್ಲಿಸಿದರು.
ಪುತ್ತೂರು ಮಾಯ್‌ದೇ ದೇವುಸ್ ಚರ್ಚ್‌ನ ಧರ್ಮಗುರು ರೆ.ಫಾ.ಲಾರೆನ್ಸ್ ಮಸ್ಕರೇನಸ್, ಬನ್ನೂರು ಸೈಂಟ್ ಅಂಟೋನಿ ಚರ್ಚ್‌ನ ಧರ್ಮಗುರು ರೆ.ಫಾ. ಜೋನ್ ಬಿ.ಮೋರಸ್, ಮರೀಲ್ ಚರ್ಚ್‌ನ ಧರ್ಮಗುರು ರೆ.ಫಾ.ಬಲ್ತೋಜರ್ ಪಿಂಟೋ, ಸುಧಾನ ಚರ್ಚ್‌ನ ಧರ್ಮಗುರು ರೆ. ಫಾ ವಿಜಯ ಹಾರ್ವಿನ್, ಪಂಜಳ ಮಲಂಕರ ಕ್ಯಥೋಲಿಕ್ ಇಗರ್ಜಿಯ ಧರ್ಮಗುರುಗಳು ಬಿಷಪ್ ಮಕಾರಿಯೋಸ್‌ರವರನ್ನು ಭೇಟಿ ಮಾಡಿ ಹೂಗುಚ್ಚ ನೀಡಿ ಹಬ್ಬದ ಶುಭಾಶಯ ಹಂಚಿಕೊಂಡರು.
ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾ, ಪೂಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಪೂರ್ಣೇಶ್ ಭಂಡಾರಿ, ವಕ್ತಾರೆ ಚಂದ್ರಪ್ರಭಾ ಗೌಡ, ಪುತ್ತೂರು ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಶರೋನ್ ಸೀಕ್ವೇರಾ ಉಪಸ್ಥಿತರಿದ್ದರು.