ಡಿ.31:ಹೊಸ ವರ್ಷದ ಸಂಭ್ರಮ ಪುತ್ತೂರು ಗಾರ್ಡನಿನಲ್ಲಿ ಆಚರಿಸಿ-ಮ್ಯೂಸಿಕ್ ಬ್ಯಾಂಡ್, ಡಿಜೆ, ಡ್ಯಾನ್ಸ್, ಫುಡ್ ಫೆಸ್ಟಿವಲ್ ಆಕರ್ಷಣೆ

0

ಪುತ್ತೂರು: 2025 ನೂತನ ವರ್ಷದ ಆಗಮನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಈ ಹೊಸ ವರ್ಷದ ಸಂಭ್ರಮದ ಕ್ಷಣವನ್ನು ಆಚರಿಸಲು ಪ್ರತಿಯೋರ್ವರು ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷವನ್ನು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉಣಬಡಿಸಲು  ಪುತ್ತೂರು ಗಾರ್ಡನ್ ಕಾಯುತ್ತಿದೆ.

ಹೌದು, ಡಿ.31 ರಂದು ರಾತ್ರಿ ಏಳು ಗಂಟೆಗೆ ಇಲ್ಲಿನ ಎಪಿಎಂಸಿ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ಹಿಂದುಗಡೆ ಹಸಿರು ಹುಲ್ಲುಹಾಸಿನ ಹೊದಿಕೆ, ಶೃಂಗಾರಮಯ ಲೈಟಿಂಗ್ಸ್ ಗಳಿಂದ, ಸುಸಜ್ಜಿತ ವೇದಿಕೆಯನ್ನೊಳಗೊಂಡ ಪುತ್ತೂರು ಗಾರ್ಡನಿನಲ್ಲಿ ಹೊಸ ವರ್ಷದ ಸಂಭ್ರಮ ಅದ್ದೂರಿಯಲ್ಲಿ ನಡೆಯಲಿದೆ. ಮ್ಯೂಸಿಕ್ ಬ್ಯಾಂಡ್, ಡಿಜೆ, ಡ್ಯಾನ್ಸ್, ಫುಡ್ ಫೆಸ್ಟಿವಲ್ ಮೂಲಕ ವಿಶೇಷ ಆಕರ್ಷಣೆಯನ್ನು ಪ್ರೇಕ್ಷಕರಿಗೆ ಸಂಘಟಕರು ನೀಡುತ್ತಿದ್ದಾರೆ. ರಂಜಿತ್ ಗೌಡರವರಿಂದ ಡಿಜೆ, ಟೀಮ್ ಎಕ್ಸ್ಟ್ರೀಮ್ ತಂಡದಿಂದ ಡ್ಯಾನ್ಸ್, ಇಂಟರ್ ಸ್ಟೆಲ್ಲರ್ ತಂಡದಿಂದ ಮ್ಯೂಸಿಕ್ ಬ್ಯಾಂಡ್, ವಿವಿಧ ಖಾದ್ಯಗಳ ಫುಡ್ ಫೆಸ್ಟಿವಲ್ ಜೊತೆಗೆ ಯತೀಶ್ ಶಂಭೂರ್ ರವರ ನಿರೂಪಣೆ ಹೊಸ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸಲಾಗುತ್ತದೆ. 

ಎಂಟ್ರಿ ಫೀಸ್ ರೂ.200/-:
ಪುತ್ತೂರು ಗಾರ್ಡನ್ ಹಮ್ಮಿಕೊಂಡ ಈ ಹೊಸ ವರ್ಷದ ಸಂಭ್ರಮಕ್ಕೆ ಈಗಾಗಲೇ ಪ್ರೇಕ್ಷಕ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಯಕ್ರಮವನ್ನು ಆನಂದಿಸಲು ರೂ.200 ಪ್ರವೇಶ ಶುಲ್ಕವನ್ನು ಸಂಘಟಕರು ಅಳವಡಿಸಿಕೊಂಡಿದ್ದು, ‘BOOKMYSHOW.COM ನಲ್ಲಿ ಟಿಕೇಟ್ ಅನ್ನು ಕಾದಿರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9448835461, 9880379608 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here