ಪುತ್ತೂರು : ಅತ್ಯುತ್ತಮ ಗುಣಮಟ್ಟದ ಕ್ರೀಡಾ ಉಡುಪುಗಳ ತಯಾರಿಕೆಯಲ್ಲಿ ಲಂಡನ್ನಲ್ಲೇ (ಯು.ಕೆ) ಪ್ರಸಿದ್ಧಿ ಪಡೆದುಕೊಂಡಿರುವಂತಹ, ವಿಶ್ವದೆಲ್ಲೆಡೆಗೂ ತನ್ನ ಸಾಮಾಗ್ರಿಗಳನ್ನು ರವಾನಿಸಿ ಮಾರುಕಟ್ಟೆ ಹೊಂದಿರುವ, ಬೆಳ್ತಂಗಡಿಯ ರೀನಾ ಪೀಟರ್ ಇವರ ಪತಿ ಜುಲಿಯಾನ್ ಪೀಟರ್ ಅಲೋಶಿಯಸ್ ಇವರ ಮಾಲೀಕತ್ವದ ಪೀಟರ್ ಸ್ಪೋರ್ಟ್ಸ್ ವೇರ್ಸ್ ಪ್ರೈ.ಲಿ. ಇದರ ಚೊಚ್ಚಲ ಶಾಖೆಯು ಇಲ್ಲಿನ ಮುಖ್ಯರಸ್ತೆ ಕಣ್ಣನ್ಸ್ ಸಂಕೀರ್ಣದಲ್ಲಿ ಜ.8 ರಂದು ಶುಭಾರಂಭಗೊಂಡಿತು.
ನೂತನ ಶಾಖೆಯ ಉದ್ಘಾಟನೆಯನ್ನು ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕ ಪ್ರದೀಪ್ ಡಿ’ಸೋಜಾ ಇವರು ನೆರವೇರಿಸಿ, ಶುಭ ಹಾರೈಸಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ಅಶೋಕ್ ರಾಯನ್ ಕ್ರಾಸ್ತಾರವರು ಧಾರ್ಮಿಕ ಕೈಂಕರ್ಯ ನೆರವೇರಿಸಿ ಮಾತನಾಡಿ, ಜುಲಿಯಾನ್ ಪೀಟರ್ ಅಲೋಶಿಯಸ್ ಕ್ರೀಡೆಗೆ ಅತೀ ಹೆಚ್ಚಿನ ಗಮ್ಯ ನೀಡಿ, ರಾಷ್ಟ್ರ ಮಟ್ಟದಲ್ಲಿ ವಾಲಿಬಾಲ್ ಆಟದಲ್ಲಿ ಹೆಸರು ಗಳಿಸಿಕೊಂಡಿರುವವರು. ಇನ್ನೂ ಹಲವರು ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು, ಅವರಿಗೂ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಬೃಹತ್ ಸ್ಪೋರ್ಟ್ಸ್ವೇರ್ ಮಳಿಗೆ ತೆರೆವ ಚಿಂತನೆ ಮಾಡಿದ್ದಾರೆ. ಇಂತಹ ಯೋಜನೆಗೆ ಅವರನ್ನು ಅಭಿನಂದಿಸುವೆ ಹಾಗೂ ಉತ್ತಮ ಸೇವೆಯನ್ನು ನೀಡುವ ಮೂಲಕ ಗ್ರಾಹಕ ಜನತೆ ಮತ್ತೆ – ಮತ್ತೆ ಈ ಮಳಿಗೆಯ ಸಂಪರ್ಕಕ್ಕೆ ಬರುವಂತಾಗಲಿಯೆಂದು ಹೇಳಿ ಶುಭ ಹಾರೈಸಿದರು.
ಇಂಡಿಯನ್ ವಾಲಿಬಾಲ್ ಕೋಚ್ ನಾರಾಯಣ ಆಳ್ವ, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಶಂಕರ ಶೆಟ್ಟಿ ಬಿಸಿರೋಡ್, ರಾಮನಾಥ ಆಳ್ವ ಕಾಸರಗೋಡು, ಪಿ.ವಿ. ನಾರಾಯಣಣ್ ಪುತ್ತೂರು, ಅಲ್ವಿನ್ ಡಿಸೋಜಾ ಬೆಳ್ತಂಗಡಿ, ಮಾಲೀಕರ ಸಹೋದರ ಅಶೋಕ್ ಪೀಟರ್ ಹಾಸನ, ರಾಯನ್ ಪೀಟರ್ ಹಾಸನ, ಶಿಕ್ಷಕ ಶ್ರೀಕಾಂತ್ ಕಂಬಳಕೋಡಿ, ಎವರೆಸ್ಟ್ ಪಿಂಟೋ, ಮನೋಜ್ ನೆಲ್ಯಾಡಿ, ಅಶ್ರಫ್ ಒಕ್ಕೆತ್ತೂರು, ಹರೀಶ್ ವಿಟ್ಲ, ವಿಲ್ಪ್ರೆಡ್ ವೇಗಸ್, ಎವಲಿನ್ ಡಿ’ಸೋಜಾ ಬೆಳ್ತಂಗಡಿ ಹಾಗೂ ಶಾಂತಿ ಬೆಳ್ತಂಗಡಿ ಮತ್ತು ಫ್ರೆಂಡ್ಸ್ ಸ್ಪೋರ್ಟ್ಸ್ ಮಾಲಕ ಲೋಕೇಶ್ ಸಹಿತ ಹಲವಾರು ಅತಿಥಿಗಳು ಇದ್ದರು.
ವ್ಯವಸ್ಥಾಪಕ ವಿಲ್ಪ್ರೇಡ್ ವೇಗಸ್ ಹಾಗೂ ಸಿಬ್ಬಂದಿಗಳು ಸಹಕಾರ ನೀಡಿದರು. ಮಳಿಗೆಯು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5.30 ವರೆಗೆ ವ್ಯವಹರಿಸಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8123343159 ಕರೆ ಮಾಡುವಂತೆ ಮಳಿಗೆ ವ್ಯವಸ್ಥಾಪಕ ವಿಲ್ಪ್ರೆಡ್ ವೇಗಸ್ ವಿನಂತಿಸಿದ್ದಾರೆ.
ಶುಭಾರಂಭದ ಸಲುವಾಗಿ 10% ಡಿಸ್ಕೌಂಟ್…
ಕಳೆದ 8 ವರ್ಷಗಳಿಂದ ಲಂಡನ್ನಲ್ಲಿ ವ್ಯವಹರಿಸುತ್ತಿರುವ ಪೀಟರ್ ಸ್ಪೋರ್ಟ್ಸ್ ವೇರ್ ಇದರ ಶಾಖೆ ಪುತ್ತೂರಿನಲ್ಲಿ ಆರಂಭಿಸಿದ್ದೇವೆ. ಇಲ್ಲಿ ಪ್ರತಿ ಉಡುಪಿನ ಬೆಲೆಯು 200 ರಿಂದ 700 ರೂಪಾಯಿಗಳವರೆಗೆಯಿದ್ದು, ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನೇ ಒದಗಿಸುತ್ತಿದ್ದೇವೆ. ತಾವು ಯಾವುದೇ ಬಗೆಯ ಉಡುಪಿಗು ಆರ್ಡರ್ ನೀಡಿದ್ದಲ್ಲಿ 3 ರಿಂದ 7 ದಿನಗಳ ಒಳಗೆ ಒದಗಿಸಬಲ್ಲೆವು ಮತ್ತು ಶುಭಾಂಭದ ಪ್ರಯುಕ್ತ ಇದೀಗ ಕೆಲ ದಿನಗಳ ವರೆಗೆ 10% ರಿಯಾಯಿತಿಯು ಲಭ್ಯ.