ಪುತ್ತೂರು: ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ “ಮುರಳಿ ಈ ಪಿರ ಬರೊಲಿ” ತುಳು ಹಾಸ್ಯಮಯ ನಾಟಕವು ಸರಕಾರಿ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ.11ರಂದು ರಾತ್ರಿ ಗಂಟೆ 7.30 ಕೆ ನಡೆಯಲಿದೆ.
ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ಈ ವರ್ಷದ “ಸೂಪರ್ ಹಿಟ್ ನಾಟಕ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಕಲಾಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ.
ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ಈ ವರ್ಷದ ಸೂಪರ್ ಹಿಟ್ ನಾಟಕ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಕಲಾಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ. ನಾಟಕದಲ್ಲಿ ಉತ್ತಮವಾದ ಸಂದೇಶ, ಹಾಸ್ಯದ ಹೊನಲು ಈ ನಾಟಕದ ಯಶಸ್ವಿಗೆ ಕಾರಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಯಾಪದ ಕಲಾವಿದೆರ್ ಉಬಾರ್ ತಂಡದ ಹೊಸ ಪ್ರಯತ್ನ ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹದಿಂದ ಹಲವಾರು ಪ್ರದರ್ಶನಗಳತ್ತ ಮುಂದಡಿ ಇಟ್ಟಿದೆ. ಶಶಿರಾಜ್ ಕೂಳೂರು ಇವರು ತುಳುನಾಟಕ ರಚಿಸಿ ನಿರ್ದೇಶನವನ್ನು ಮಾಡಿದ್ದಾರೆ. ಸಂಗೀತ ಮಾಂತ್ರಿಕ ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ, ಸಂಧ್ಯಾ ಶ್ರೀ ಹಿರೇಬಂಡಾಡಿ ಇವರ ನೃತ್ಯ ಸಂಯೋಜನೆ, ರಾಜೇಶ್ ಶಾಂತಿನಗರ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ, ಲಿತು ಸೌಂಡ್ಸ್ ಮತ್ತು ಲೈಟ್ಸ್, ಇದರ ಕೃಷ್ಣ ಮುಂಡ್ಯ, ಸಿದ್ದು ಬೆದ್ರ ಇವರ ಕೈ ಚಳಕ, ಪ್ರದೀಪ್ ಕಾವು ಇವರ ಮುಖ ವರ್ಣಿಕೆಯೊಂದಿಗೆ ಗುಣಕರ ಆಗ್ನಾಡಿ ಅವರ ನಿರ್ವಹಣೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
ಕಲಾವಿದರುಗಳಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ್ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್. ಆರ್.ಪುತ್ತೂರು, ಅನೀಶ್ ಉಬಾರ್ ಇವರ ಅಮೋಘ ಅಭಿನಯದಲ್ಲಿ ನಾಟಕವು ಮೂಡಿ ಬರಲಿದೆ ಎಂದು ತಂಡದ ಸಂಚಾಲಕರಾದ ಕಿಶೋರ್ ಜೋಗಿ ಉಬಾರ್ ಇವರು ತಿಳಿಸಿದ್ದಾರೆ ಎಂದು ತಂಡದ ಸಂಚಾಲಕ ಕಿಶೋರ್ ಜೋಗಿ ಉಬಾರ್ ಇವರು ತಿಳಿಸಿದ್ದಾರೆ. ನಾಟಕ ಪ್ರದರ್ಶನದ ಬುಕಿಂಗ್ ಗೆ ಈ ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಿ. 9902543273, 8073641071, 9008136330. 9980389016