ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದಾರೆ.
ಪ್ರಧಾನ ಅರ್ಚಕ ರಾಮಕೃಷ್ಣ ಭಟ್, ಪ.ಜಾತಿ ಅಥವಾ ಪ.ಪಂಗಡ ಸ್ಥಾನದಿಂದ ವಿಜಯ ನಾಯ್ಕ ಲಿಂಗಪಾಲು, ಮಹಿಳಾ ಸ್ಥಾನದಿಂದ ರೇಣುಕಾ ಎಂ.ರೈ ಮಠಂತಬೆಟ್ಟು, ಯಮುನಾ ಪುರುಷೋತ್ತಮ ಪೂಜಾರಿ ಡೆಕ್ಕಾಜೆ, ಸಾಮಾನ್ಯ ಸ್ಥಾನದಿಂದ ಎಂ. ನಿರಂಜನ ರೈ ಮಠಂತಬೆಟ್ಟು, ಕೇಶವ ಭಂಡಾರಿ ಕೈಪ, ಕುಮಾರನಾಥ ಪಲ್ಲತ್ತಾರು, ಸತೀಶ್ ನಾಯಕ್ ಮೋನಡ್ಕ ಹಾಗೂ ದೇವದಾಸ ಗೌಡ ಪಿಲಿಗುಂಡರವರನ್ನು ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.