ಪುತ್ತೂರು: ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ “ಕಲ್ಪ” ಕೊಬ್ಬರಿ ಎಣ್ಣೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಕ್ಯಾಂಪ್ಕೋ ಬ್ರಾಂಡ್ “ಕಲ್ಪ ” ಕೊಬ್ಬರಿ ಎಣ್ಣೆ ಯ 5 ಲೀಟರ್ ಕ್ಯಾನ್ ಬಿಡುಗಡೆಯನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ ವಿ ಸತ್ಯನಾರಾಯಣ,ಕ್ಯಾಂಪ್ಕೊ ಸಂಸ್ಥೆಯ ಮಹಾಪ್ರಬಂದಕಿ ರೇಷ್ಮಾ ಮಲ್ಯ,ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉಪ ಮಹಾಪ್ರಬಂದಕ ಶ್ಯಾಮ್ ಪ್ರಸಾದ್, ಕಾರ್ಖಾನೆಯ ಹಿರಿಯ ಅಧಿಕಾರಿಗಳು ಮತ್ತು ತೆಂಗಿನಕಾಯಿ ಮಾರುಕಟ್ಟೆ ವಿಭಾಗದ ಅರುಣ್ ಕುಮಾರ್ ಸಿ. ಎಚ್ ರವರು ಉಪಸ್ಥಿತರಿದ್ದರು.
ಈಗಾಗಲೇ ಹಲವು ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸಿ ಮನೆ ಮಾತಾಗಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಸಹಕಾರಿ ಸಂಸ್ಥೆ ಕ್ಯಾಂಪ್ಕೊ “ಕಲ್ಪ” ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ನೀಡುತ್ತಿರುವುದು ಎಣ್ಣೆಯ ಪರಿಶುದ್ಧತೆ ಮತ್ತು ಗುಣಮಟ್ಟಕ್ಕೆ ಅತ್ಯಂತ ಖಾತ್ರಿಯಾಗಿದೆ.
“ಕಲ್ಪ” ತೆಂಗಿನ ಎಣ್ಣೆ 500 ml ,1000 ml ಬಾಟಲ್ ಮತ್ತು ಪ್ಯಾಕೆಟ್ ಹಾಗು 5 ಲೀಟರ್ ಕ್ಯಾನ್ ಗಳಲ್ಲಿ ಲಭ್ಯವಿರುತ್ತದೆ.