ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಾಮಪತ್ರ ತಿರಸ್ಕಾರ-ಹೈಕೋರ್ಟ್ ನಿಂದ ತಡೆಯಾಜ್ಞೆ : ತಿರಸ್ಕೃತಗೊಂಡ ನಾಮಪತ್ರ ಸ್ವೀಕರಿಸಲು ಆದೇಶ !

0

ಪುತ್ತೂರು: ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಗೆ ಸಂಬಂಧಿಸಿ ತಿರಸ್ಕೃತಗೊಂಡಿದ್ದ ಕೋಡಿಂಬಾಡಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ರಾಜಶೇಖರ ಜೈನ್ ಅವರು ಸಲ್ಲಿಸಿದ ನಾಮಪತ್ರವನ್ನು ತಿರಸ್ಕಾರಗೊಳಿಸಿರಿವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜೊತೆಗೆ ನಾಮಪತ್ರವನ್ನು ಸ್ವೀಕಾರ ಮಾಡಬೇಕೆಂದು ಆದೇಶವನ್ನೂ ನೀಡಲಾಗಿದೆ.


ಜ.19ಕ್ಕೆ ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಆಡಳಿತ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಶೇಖರ ಜೈನ್ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ರಾಜಶೇಖರ ಜೈನ್ ಅವರ ರಾಜೇಶೇಖರ್ ಜೈನ್ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆಂದು ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿ ಎಂ.ಎಸ್ ರಘು ಅವರು ತಿರಸ್ಕಾರ ಮಾಡಿದ್ದರು. ಆದರೆ ಸರಕಾರಣವಿಲ್ಲದೆ ನಾಮಪತ್ರ ತಿರಸ್ಕಾರ ಮಾಡಿದ್ದಾರೆ ಎಂದು ರಾಜಶೇಖರ ಜೈನ್ ಆರೋಪಿಸಿದ್ದಲ್ಲದೆ ನ್ಯಾಯಕ್ಕಾಗಿ ನೋಟರಿ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ಅವರ ಮಾರ್ಗದರ್ಶನದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದೀಗ ಹೈಕೋರ್ಟ್ ರಾಜಶೇಖರ ಜೈನ್ ಅವರ ನಾಮಪತ್ರವನ್ನು ತಿರಸ್ಕಾರ ಮಾಡಿರುವುದಕ್ಕೆ ತಡೆಯಾಜ್ಞೆ ನೀಡಿದ್ದಲ್ಲದೆ ಅವರ ನಾಮಪತ್ರ ಸ್ವೀಕಾರ ಮಾಡಬೇಕೆಂದು ಆದೇಶ ನೀಡಿದೆ. ಜೊತೆಗೆ ಫೆ.3 ರಂದು ಕಾರಣ ನೀಡಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಹಕಾರ ಇಲಾಖೆಯ ಬೆಂಗಳೂರು, ಮಂಗಳೂರು, ಪುತ್ತೂರು ಕಚೇರಿಗೆ ನೋಟೀಸ್ ಜಾರಿ ಮಾಡಲಾಗಿದೆ.ರಾಜಶೇಖರ ಜೈನ್ ಅವರ ಪರವಾಗಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಸುಕುಮಾರ್ ಜೈನ್ ಅವರು ವಾದಿಸಿದರು.

LEAVE A REPLY

Please enter your comment!
Please enter your name here