ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಕೆ ವೇಳೆ ಕಾಂಕ್ರೀಟ್ ರಸ್ತೆಯಿಡಿ ಧೂಳು-ಟ್ಯಾಂಕರ್ ಮೂಲಕ ನೀರು ಹಾಕಿ ಧೂಳು ಮಣ್ಣನ್ನು ತೆರವುಗೊಳಿಸಲು ಸ್ಪಂದಿಸಿದ ಗ್ರಾ.ಪಂ. ಉಪಾಧ್ಯಕ್ಷ

0

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಣಿಯೂರು, ಮಾದೋಡಿ, ಪೆರುವಾಜೆ ಸಂಪರ್ಕ ರಸ್ತೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಸಲು ಮಾರ್ಗದ ಬದಿಯಲ್ಲಿ ಅಗೆದ ಕಾರಣ ಕಾಂಕ್ರೀಟ್ ರಸ್ತೆಯಿಡಿ ಮಣ್ಣು ಬಿದ್ದು ಧೂಳು ತುಂಬಿ ಶಾಲಾ ಮಕ್ಕಳು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಧೂಳಿನಿಂದ ರಸ್ತೆಯ ಪಕ್ಕದಲ್ಲೆ ಇರುವ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದನ್ನು ಮನಗಂಡು ಈ ಎಲ್ಲ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಸಂಬಂಧ ಪಟ್ಟವರನ್ನು ಸಂಪರ್ಕಿಸಿ ತಾನೇ ನಿಂತು ಟ್ಯಾಂಕರ್ ಮೂಲಕ ನೀರು ಹಾಕಿ ರಸ್ತೆಯಲ್ಲಿ ಇರುವ ಧೂಳು ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ ತಕ್ಷಣ ಸ್ಪಂದಿಸಿದ್ದಾರೆ.

ಇವರ ಜೊತೆ ದಿನೇಶ್ ಕೆಳಗಿನಮನೆ ಅವರು ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here