ಸಮಾಜಸೇವೆಯೇ ರೋಟರಿ ಪುತ್ತೂರಿನ ಹೆಗ್ಗುರುತು-ವಿಕ್ರಂ ದತ್ತ
ಪುತ್ತೂರು:ರೋಟರಿ ಪುತ್ತೂರು ತನ್ನ ಸ್ವಾರ್ಥರಹಿತ ಸೇವೆಯೊಂದಿಗೆ ಮತ್ತು ಸದಸ್ಯರ ಏಕತೆಯ ಶಕ್ತಿಯೊಂದಿಗೆ ಸಮಾಜಮುಖಿ ಸೇವೆಯನ್ನು ಮಾಡುತ್ತಾ ವಜ್ರಮಹೋತ್ಸವದ ಹೊಸ್ತಿಲಲ್ಲಿದ್ದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಹೆಮ್ಮೆಯನ್ನು ಗಳಿಸಿ ಸಮಾಜಸೇವೆಯೊಂದಿಗೆ ಪುತ್ತೂರು ರೋಟರಿ ಕ್ಲಬ್ ಪುತ್ತೂರಿನಲ್ಲಿ ಹೆಗ್ಗುರುತು ಸೃಷ್ಟಿಸಿದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರುನಿಂದ ಜ.19 ರಂದು ಬೊಳ್ವಾರು ಮಹಾವೀರ ವೆಂಚರ್ಸ್‌ನ ಹವಾನಿಯಂತ್ರಿತ ಸಭಾಂಗಣದಲ್ಲಿ ಸಂಜೆ ಜರಗಿದ ಕ್ರಿಸ್ಮಸ್, ಹೊಸ ವರ್ಷಾಚರಣೆ ಹಾಗೂ ಕ್ಲಬ್‌ನ ವಜ್ರಮಹೋತ್ಸವ ವರ್ಷ(ಡೈಮಂಡ್ ಜ್ಯುಬಿಲಿ)ದ ಉದ್ಘಾಟನೆಯ ಪ್ರಯುಕ್ತ ಅವರು ವಜ್ರಮಹೋತ್ಸವದ ನೂತನ ಲಾಂಛನವನ್ನು ಉದ್ಘಾಟಿಸಿ ಮಾತನಾಡಿದರು.
ಜನಮಾನಸಕ್ಕೆ ಹತ್ತಿರವಾಗುವಂತಹ ಶಾಶ್ವತ ಕೊಡುಗೆಗಳನ್ನು ಕ್ಲಬ್ ನೀಡಿದೆ-ಡಾ.ಶ್ರೀಪತಿ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಸ್ವಾಗತಿಸಿ, ಮಾತನಾಡಿ, ರೋಟರಿ ಪುತ್ತೂರು ಕ್ಲಬ್ ಕಳೆದ 59 ವರ್ಷಗಳಿಂದ ಸಮಾಜಕ್ಕೆ ಅತ್ತ್ಯುನ್ನತ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅದರಲ್ಲೂ ಜನಮಾನಸಕ್ಕೆ ಹತ್ತಿರವಾಗುವಂತಹ ಶಾಶ್ವತ ಕೊಡುಗೆಗಳನ್ನು ನೀಡಿ ಮಾದರಿ ಎನಿಸಿದೆ. ಕಳೆದ ಆರೇಳು ತಿಂಗಳಿನಿಂದ 60ನೇ ಅಧ್ಯಕ್ಷನಾಗಿ ಕ್ಲಬ್ ಮುನ್ನೆಡೆಸುತ್ತಿರುವ ನನಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸದಸ್ಯರಿಂದ ಒಳ್ಳೆಯ ಸಹಕಾರ ಸಿಕ್ಕಿರುತ್ತದೆ. ಎಲ್ಲರ ಪ್ರೀತಿಯೊಂದಿಗೆ ಸಮಾಜದಲ್ಲಿ ಸೇವೆ ನೀಡುವುದೇ ನಮ್ಮ ಗುರಿಯಾಗಿದೆ ಎಂದರು.
ಪುತ್ತೂರು ರೋಟರಿ ಕ್ಲಬ್ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದೆ-ಡಾ.ಹರ್ಷಕುಮಾರ್ ರೈ:
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈ ಮಾತನಾಡಿ, ವಲಯ ಐದರಲ್ಲಿ ಹನ್ನೊಂದು ಕ್ಲಬ್‌ಗಳಿದ್ದು, ಸಮಾಜಮುಖಿ ಅಭಿವೃದ್ಧಿ ಬಗ್ಗೆ, ಜಿಲ್ಲಾ ಕಾರ್ಯಗಳ ಅನುಷ್ಟಾನದ ಬಗ್ಗೆ, ಜಿಲ್ಲಾ ಕಾರ್ಯಗಳ ಅನುಮೋದನೆ, ಶಾಶ್ವತ ಕೊಡುಗೆಗಳು ಹೀಗೆ ಪ್ರತಿಯೊಂದು ಕಾರ್ಯಗಳಲ್ಲಿ ರೋಟರಿ ಪುತ್ತೂರು ಮುಂಚೂಣಿಯಲ್ಲಿದೆ. ಕ್ಲಬ್ ಪೂರ್ವಾಧ್ಯಕ್ಷರು ಉತ್ತಮ ಕಾರ್ಯ ನಿರ್ವಹಿಸಿದ್ದರಿಂದಲೇ ಕ್ಲಬ್‌ನ ವರ್ಚಸ್ಸು ಹೆಚ್ಚಿದೆ ಮಾತ್ರವಲ್ಲ ಕ್ಲಬ್ ನೊಂದವರ ಬಾಳಿಗೆ ಆಶಾಕಿರಣದೊಂದಿಗೆ ಕ್ಲಬ್ ಎತ್ತರಕ್ಕೆ ಬೆಳೆಯಲಿ ಎಂದರು.
ಶೀಘ್ರದಲ್ಲಿ ಮೆಮೋಗ್ರಾಫಿ ಪ್ರಾಜೆಕ್ಟ್ ಲೋಕಾರ್ಪಣೆ-ಬಲರಾಮ ಆಚಾರ್ಯ:
ಕ್ಲಬ್ ಡೈಮಂಡ್ ಜ್ಯುಬಿಲಿ ಚೇರ್ಮನ್ ಬಲರಾಮ ಆಚಾರ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿ, 1965ರಲ್ಲಿ ಆರಂಭಗೊಂಡ ರೋಟರಿ ಪುತ್ತೂರು ಇದೀಗ ವಜ್ರಮಹೋತ್ಸವವನ್ನು ಆಚರಿಸುತ್ತಿದೆ. ಕಳೆದ ಅರುವತ್ತು ವರ್ಷಗಳಲ್ಲಿ ನಿವೃತ್ತ ಅಧ್ಯಾಪಕರನ್ನು ಗೌರವಿಸುವುದು, ರೋಟರಿಪುರದಲ್ಲಿ ಮನೆ ನಿರ್ಮಾಣ, ಬ್ಲಡ್ ಬ್ಯಾಂಕ್ ಹಾಗೂ ಬ್ಲಡ್ ಬ್ಯಾಂಕ್ ಮೇಲ್ದರ್ಜೆಗೇರಿಸುವಿಕೆ, ಡಯಾಲಿಸಿಸ್ ಘಟಕ, ಕಣ್ಣಿನ ಆಸ್ಪತ್ರೆ, ಪುರಭವನವನ್ನು ನಿರ್ಮಿಸುವಲ್ಲಿ ಕೈಜೋಡಿಸುವಿಕೆ, ರಕ್ತ ಸಂಗ್ರಹಣಾ ವಾಹನ, ಕೃತಕ ಕಾಲು ಜೋಡಣೆ, ವಿವಿಧ ಆರೋಗ್ಯ ಶಿಬಿರಗಳು ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಅಭಿವೃದ್ಧಿಯತ್ತ ಕೈಜೋಡಿಸಿದೆ. ಪ್ರಸ್ತುತ ವಜ್ರಮಹೋತ್ಸವದ ಸಂದರ್ಭ ಗ್ಲೋಬಲ್ ಮ್ಯಾಚಿಂಗ್ ಗ್ರ್ಯಾಂಟ್ ಪ್ರಾಜೆಕ್ಟ್‌ನಲ್ಲಿ ರೂ.60 ಲಕ್ಷ ವೆಚ್ಚದಲ್ಲಿ ಮೆಮೋಗ್ರಾಫಿ ಪ್ರಾಜೆಕ್ಟ್ ಕೈಗೆತ್ತಿಗೊಳ್ಳಲಿದ್ದು ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದರು.
ಕ್ಲಬ್ ಪೂರ್ವಾಧ್ಯಕ್ಷರಿಗೆ ಗೌರವ:
ಕಳೆದ 59 ವರ್ಷಗಳಿಂದ ಕ್ಲಬ್ ಅನ್ನು ಮುನ್ನೆಡೆಸಿದ ಅಧ್ಯಕ್ಷರಾದ ಕೆ.ಶಿವಶಂಕರ್ ಭಟ್, ಮುಳಿಯ ಶ್ಯಾಮ ಭಟ್, ಗಿಲ್ಬರ್ಟ್ ಡಿ’ಸೋಜ, ಬಿ.ರಾಮ ಭಟ್, ಕೆ.ಗೋಪಾಲಕೃಷ್ಣ ಭಟ್, ರೆ.ವಿಜಯ ಹಾರ್ವಿನ್, ಡಿ.ಬಿ ಶ್ಯಾಮ, ವಿ.ಕೆ ಜೈನ್, ಎನ್.ಬಾಲಕೃಷ್ಣ ಕೊಳತ್ತಾಯ, ಜಿ.ಎಲ್ ಬಲರಾಮ ಆಚಾರ್ಯ, ಎನ್.ಕೆ ಜಗನ್ನೀವಾಸ್ ರಾವ್, ಉದಯ ಭಟ್, ಪಿ.ಸತೀಶ್ ರಾವ್, ಡಾ.ಭಾಸ್ಕರ್ ಎಸ್, ವಿ.ಜೆ ಫೆರ್ನಾಂಡೀಸ್, ಡಾ.ಅಶೋಕ್ ಪ್ರಭು, ಕೆ.ಆರ್ ಆಚಾರ್ಯ, ಎಂ.ಎಸ್ ರಘುನಾಥ್ ರಾವ್, ಎಂ.ಪ್ರಭಾಕರ್, ಚಿದಾನಂದ ಬೈಲಾಡಿ, ಶ್ರೀಕಾಂತ್ ಕೊಳತ್ತಾಯ, ಎಂ.ಜಿ ರೈ, ಪಿ.ಡಿ ಕೃಷ್ಣಕುಮಾರ್ ರೈ, ಎಂ.ಬಿ ವಿಶ್ವನಾಥ್ ರೈ, ಆಸ್ಕರ್ ಆನಂದ್, ಎಂ.ಜಿ ರಫೀಕ್, ಡಾ.ಅಶೋಕ್ ಪಡಿವಾಳ್, ಎ.ಜೆ ರೈ, ವಾಮನ್ ಪೈ, ಎಸ್.ಭುಜಂಗ ಆಚಾರ್ಯ, ಝೇವಿಯರ್ ಡಿ’ಸೋಜ, ಮಧು ನರಿಯೂರು, ಉಮಾನಾಥ್ ಪಿ.ಬಿ, ಜೈರಾಜ್ ಭಂಡಾರಿರವರುಗಳನ್ನು ಗುರುತಿಸಿ ಗೌರವಿಸಲಾಯಿತು.
ಸ್ಥಾಪಕ/ಹಿರಿಯ ಸದಸ್ಯರಿಗೆ ಸನ್ಮಾನ:
ಕಳೆದ 59 ವರ್ಷಗಳಿಂದ ಕ್ಲಬ್ ಹಲವು ಏಳು-ಬೀಳುಗಳನ್ನು ಕಂಡು ಮುನ್ನೆಡೆಯುತ್ತಿದೆ. ಈ ಸಂದರ್ಭದಲ್ಲಿ ಕ್ಲಬ್ ಸ್ಥಾಪಕ ಸದಸ್ಯರಾದ ಕೆ.ಆರ್ ಶೆಣೈರವರ ಅನುಪಸ್ಥಿತಿಯಲ್ಲಿ ಅವರ ಪುತ್ರರಾದ ಕೆ.ವಿ ಶೆಣೈ, ಹಿರಿಯ ಸದಸ್ಯರಾದ 1973ರಲ್ಲಿ ಸೇರ್ಪಡೆಗೊಂಡ ಡಾ.ಎಂ.ಎಸ್ ಭಟ್, 1975ರಲ್ಲಿ ಸೇರ್ಪಡೆಗೊಂಡ ಬಾಲಕೃಷ್ಣ ಕೊಳತ್ತಾಯರವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಗುರುರಾಜ ಕೊಳತ್ತಾಯರವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಅಂಗನವಾಡಿಗಳಿಗೆ ಪಾದರಕ್ಷೆ/ಹೊಲಿಗೆ ಯಂತ್ರಗಳ ಹಸ್ತಾಂತರ:
ಕ್ಲಬ್‌ನ ಸಮುದಾಯ ಸೇವಾ ಅಭಿವೃದ್ಧಿ ಯೋಜನೆ ಪ್ರಯುಕ್ತ ಕ್ಲಬ್ ಮಾಜಿ ಅಧ್ಯಕ್ಷ, ದರ್ಬೆ ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್‌ರವರ ಪ್ರಾಯೋಜಕತ್ವದಲ್ಲಿ ಮುಕ್ರಂಪಾಡಿ, ಸಂಜಯನಗರ, ಮರೀಲು, ಬಾಲವನ, ಕಲ್ಲಾರೆ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಗೆ ಪಾದರಕ್ಷೆಗಳನ್ನು ಹಾಗೂ ಫಲಾನುಭವಿಗಳಾದ ರೇಶ್ಮ ಬಿ.ಕೆ, ಚೈತ್ರಾ ಗೌಡ, ಜಯಶ್ರೀ ಕೆ.ಟಿ, ವಸಂತ ಕುಮಾರಿ, ಶಶಿಕಲ ಟಿ.ರವರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಣಿಪಾಲ್ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಫ್ಲ್ಯಾಗ್‌ಗಳನ್ನು ವಿನಿಮಯ ಮಾಡಲಾಯಿತು. ಕ್ಲಬ್ ಕಾರ್ಯದರ್ಶಿ ದಾಮೋದರ್ ಕೆ.ಎ ಕ್ಲಬ್ ಚಟುವಟಿಕೆಗಳ ವರದಿ ವಾಚಿಸಿದರು. ಸದಸ್ಯ ಡಾ.ಅವಿನ್ ಗೊನ್ಸಾಲ್ವಿಸ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಮಾಜಿ ಅಧ್ಯಕ್ಷ ವಿ.ಜೆ ಫೆರ್ನಾಂಡೀಸ್ ಪ್ರಾರ್ಥಿಸಿದರು. ಕ್ಲಬ್ ಸದಸ್ಯರಾದ ಪರಮೇಶ್ವರ ಗೌಡ, ಸುಜಿತ್ ಡಿ.ರೈ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ಸಾರ್ಜೆಂಟ್ ಎಟ್ ಆರ್ಮ್ಸ್ ವಾಮನ ಪೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಡಿಜಿ ಹಾಗೂ ಡಾ.ಭಾಸ್ಕರ್ ಎಸ್ ವಂದಿಸಿದರು. ಸದಸ್ಯರಾದ ಸುರೇಶ್ ಶೆಟ್ಟಿ, ದತ್ತಾತ್ರೇಯ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ..
ಎನ್.ಸಿ.ಇ.ಆರ್.ಟಿ ನವದೆಹಲಿ ಹಾಗೂ ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಆಯೋಜನೆಯಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 2024-25ರ ಸಾಲಿನ ರಾಷ್ಟ್ರಮಟ್ಟದ ‘ಕಲಾ ಉತ್ಸವ’ದಲ್ಲಿ ಭಾಗವಹಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸುಮಾರು 600 ಸ್ಪರ್ಧಿಗಳಲ್ಲಿ ತೃತೀಯ ಸ್ಥಾನ ಪಡೆದ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರ ಪುತ್ರಿ ಪ್ರಾರ್ಥನಾ ಬಿ.ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಆರ್ಥಿಕ ನೆರವು..
ಇತ್ತೀಚೆಗೆ ಸಂಪಾಜೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ ಜೀವನ್ ಆಚಾರ್ಯರವರ ಹೆತ್ತವರು ಮೃತಪಟ್ಟಿದ್ದರು. ತಂದೆ-ತಾಯಿಗೆ ಏಕೈಕ ಪುತ್ರನಾಗಿರುವ ಜೀವನ್ ಆಚಾರ್ಯರವರ ಶೈಕ್ಷಣಿಕ ಜೀವನದ ಪರಿಸ್ಥಿತಿಯನ್ನು ಮನಗಂಡ ಕ್ಲಬ್ ಸದಸ್ಯ ಸತೀಶ್ ನಾಯಕ್‌ರವರು ಕ್ಲಬ್‌ನಲ್ಲಿ ಭಿನ್ನವಿಸಿಕೊಂಡಿದ್ದರು. ಕಳೆದ ಡಿಸೆಂಬರ್ ನಲ್ಲಿ ನಡೆದ ರೈಲಾ ಕಾರ್ಯಕ್ರಮದಲ್ಲಿ ಸದ್ರಿ ವಿದ್ಯಾರ್ಥಿಗೆ ಆರ್ಥಿಕ ನೆರವು ನೀಡುವುದೆಂದು ತೀರ್ಮಾನಿಸಿದ್ದು ಇದೀಗ ಕ್ಲಬ್‌ನ ವಜ್ರಮಹೋತ್ಸವದ ಸಂಭ್ರಮದ ಅಂಗವಾಗಿ ಕ್ಲಬ್ ಸದಸ್ಯರಿಂದ ಒಟ್ಟುಗೂಡಿಸಿದ ರೂ.60 ಸಾವಿರ ಮೊತ್ತವನ್ನು ಜೀವನ್ ಆಚಾರ್ಯರವರ ಶೈಕ್ಷಣಿಕ ವೆಚ್ಚಕ್ಕಾಗಿ ಠೇವಣಿ ಇಡಲಾಗಿದ್ದು, ಈ ಠೇವಣಿ ಪತ್ರವನ್ನು ಬಾಲಕ ಜೀವನ್ ಆಚಾರ್ಯರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಕ್ಷಮೆ, ಪ್ರೀತಿ, ಸೇವೆಯ ತಳಹದಿಯೇ ಕ್ರಿಸ್ಮಸ್ ಹಬ್ಬವಾಗಿದೆ…
ಪ್ರಭು ಯೇಸುಕ್ರಿಸ್ತರು ಶಾಂತಿದೂತರಾಗಿ ಮಾನವನಾಗಿ ಜನ್ಮ ತಾಳಿರುತ್ತಾರೆ. ದೇವರು ಹಾಗೂ ಮಾನವನನ್ನು ಭೇಟಿಯಾಗುವುದೇ ಕ್ರಿಸ್ಮಸ್ ಹಬ್ಬದ ಹೆಗ್ಗಳಿಕೆಯಾಗಿದೆ. ಕ್ರಿಸ್ಮಸ್ ಹಬ್ಬ ಕ್ರಿಸ್ತಶಕ, ಕ್ರಿಸ್ತಪೂರ್ವ ಹೀಗೆ ಎರಡು ವಿಭಾಗಗಳಾಗಿ ವಿಂಗಡಿಸುತ್ತದೆ. ಕ್ರಿಸ್ತನ ಜನನವು ಇತಿಹಾಸವನ್ನು ಸೃಷ್ಟಿಸಿದ್ದು, ಕ್ಷಮೆ, ಪ್ರೀತಿ, ಸೇವೆಯ ತಳಹದಿ ಮೇಲೆ ಕ್ರಿಸ್ಮಸ್ ಹಬ್ಬವು ನಿಂತಿದೆ.
-ಡಾ.ಸುಪ್ರಿತ್ ಲೋಬೊ, ವೈದ್ಯರು, ಜೊಸ್ಸೀಸ್ ಆಯುರ್ವೇದ ಆಸ್ಪತ್ರೆ, ಉಪ್ಪಿನಂಗಡಿ