ಪುತ್ತೂರು: ಸುನಾದ ಸಂಗೀತ ಕಲಾ ಶಾಲೆ ಪುತ್ತೂರು ಇದರ ವಾರ್ಷಿಕೋತ್ಸವ ಸುನಾದ ಸಂಗೀತೋತ್ಸವ-2025 ಕಾರ್ಯಕ್ರಮ ಜ.25ಮತ್ತು ಜ.26ರಂದು ಸುದಾನ ವಸತಿಯುತ ಶಾಲಾ ಆವರಣ. ನೆಹರುನಗರ, ಪುತ್ತೂರು ಇಲ್ಲಿ ನಡೆಯಲಿದೆ.
ಕಾರ್ಯಕ್ರಮಗಳು: ಜ. 25 ರಂದು ಮ. 2 ರಿಂದ ದೀಪೋಜ್ವಲನ ಗುರುವಂದನೆ, ಬಳಿಕ ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ. ಸಂಜೆ ೬ ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು ಹಾಡುಗಾರಿಕೆಯಲ್ಲಿ ವಿದುಷಿ ಅರ್ಚನಾ ಎಲ್. ರಾವ್ ಮೈಸೂರು, ವಯಲಿನ್‌ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಬೋಗ್, ಮೃದಂಗದಲ್ಲಿ ಡಾ. ಅಕ್ಷಯ ನಾರಾಯಣ ಕಾಂಚನ, ಮೋರ್ಸಿಂಗ್‌ನಲ್ಲಿ ವಿದ್ವಾನ್ ಬಾಲಕೃಷ್ಣ ಭಟ್ ಹೊಸಮನೆ ಸಹಕರಿಸಲಿದ್ದಾರೆ.
ಜ.26 ಬೆ. 9.30೦ರಿಂದ ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ,ಸಂಜೆ 6.00 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದ್ದು ಹಾಡುಗಾರಿಕೆಯಲ್ಲಿ ವಿದ್ವಾನ್ ಟಿ. ಎನ್. ಎಸ್. ಕೃಷ್ಣ ಚೆನ್ನೈ, ವಯಲಿನ್‌ನಲ್ಲಿ ವಿದ್ವಾನ್ ಮೈಸೂರು ವಿ.ಶ್ರೀಕಾಂತ್ ಚೆನ್ನೈ, ಮೃದಂಗದಲ್ಲಿ ಚೆನ್ನೈ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಘಟಂನಲ್ಲಿ ವಿದ್ವಾನ್ ಉಡುಪಿ ಶ್ರೀಧರ್ ತಿರುವನಂತಪುರ ಸಹಕರಿಸಲಿದ್ದಾರೆ ಸಂಗೀತಾಭಿಮಾನಿಗಳು ಉಪಸ್ಥಿತರಿರಬೇಕೆಂದು ಸುನಾದ ಸಂಗೀತ ಕಲಾ ಶಾಲೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.