ಆಲಂಕಾರು ಗ್ರಾಮಸಭೆ

0

ಆಲಂಕಾರು: ಆಲಂಕಾರು ಗ್ರಾ.ಪಂ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ಸುಶೀಲರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಪುತ್ತೂರು ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕಿ ರೇಖಾರವರು ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದರು.


ಗ್ರಾಮಸಭೆಯಲ್ಲಿ ಗ್ರಾಮಸ್ಥರ ಕೋರಂ ಇಲ್ಲದ ಗ್ರಾಮಸಭೆಯನ್ನು ರದ್ದು ಮಾಡಿ ಇಲ್ಲದಿದ್ದರೇ ಗ್ರಾಮಸಭೆಯನ್ನು ಮೂಂದೂಡಿ ಎಂದು ಗ್ರಾಮಸ್ಥರಾದ ಜನಾರ್ಧನಾ ಬಂಗೇರ,ಅಬೂಬಕ್ಕರ್ ನೆಕ್ಕರೆ,ಸೋಮಪ್ಪ ನೆಕ್ಕರೆ ಆಗ್ರಹಿಸಿದ ಘಟನೆ ನಡೆಯಿತು. ಎಲ್ಲಾ ಇಲಾಖಾಧಿಕಾರಿಗಳು ಬಂದ ಬಳಿಕವೇ ಗ್ರಾಮಸಭೆ ಪ್ರಾರಂಭ ಮಾಡಬೇಕು ಗ್ರಾಮಸಭೆಯಲ್ಲಿ ಆಶಾ,ಅಂಗನವಾಡಿ ಕಾರ್ಯಕರ್ತರು , ಸಿಬ್ಬಂದಿಗಳು ಹಾಗು ಕೆಲವು ಮಂದಿ ಗ್ರಾಮಸ್ಥರು ಮಾತ್ರ ಗ್ರಾಮಸಭೆಯಲ್ಲಿ ಉಪಸ್ಥಿತರಿರುವುದರಿಂದ ಗ್ರಾಮಸಭೆಯನ್ನು ಮೂಂದೂಡಿಕೆ ಮಾಡಿ ಇಲ್ಲದಿದ್ದರೆ ರದ್ದು ಮಾಡಿ ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ.


ನಮಗೆ ಮಾತನಾಡಲು ಗ್ರಾಮ ಸಭೆಯಲ್ಲಿ ಮಾತ್ರ ಅವಕಾಶವಿರುವ ಕಾರಣ ಎಲ್ಲಾ ಇಲಾಖಾಧಿಕಾರಿಗಳು ಗ್ರಾಮಸಭೆಗೆ ಹಾಜರಾದ ನಂತರ ಗ್ರಾಮಸಭೆ ಪ್ರಾರಂಭಿಸಬೇಕು ಹಾಗೂ ಗ್ರಾಮಸ್ಥರ ಕೋರಂ ಇಲ್ಲದ ಗ್ರಾಮಸಭೆಯನ್ನು ಮುಂದೂಡಿ ಇಲ್ಲದಿದ್ದರೆ ರದ್ದು ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮಾರ್ಗದರ್ಶಿ ಅಧಿಕಾರಿ ರೇಖಾ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ ಮಾತನಾಡಿ, ಗ್ರಾಮಸಭೆ ಆರಂಭವಾಗುವುದರ ಮೊದಲೇ ನೀವು ಗ್ರಾಮಸಭೆ ನಿಲ್ಲಿಸಿ ಎಂದು ಗದ್ದಲ ಹಾಗೂ ಗೊಂದಲ ಎಬ್ಬಿಸಿದರೆ ಗ್ರಾಮಸಭೆ ಮಾಡುವುದು ಹೇಗೆ,ಗ್ರಾಮಸಭೆಯಲ್ಲಿ ಆರೋಗ್ಯಕರ ಚರ್ಚೆಮಾಡಿ, ಎಂದು ತಿಳಿಸಿದರು.


ಅಬೂಬಕ್ಕರ್ ನೆಕ್ಕರೆ ಮಾತನಾಡಿ, ನಾವು ಆಲಂಕಾರಿನಲ್ಲಿ ಆಧಾರ್ ತಿದ್ದುಪಡಿ ಕ್ಯಾಂಪ್ ಆಯೋಜನೆ ಮಾಡಿದ್ದೇವು ಗ್ರಾ.ಪಂ ಅಧ್ಯಕ್ಷರು ಆಧಾರ್ ಕ್ಯಾಂಪ್ ಮಾಡದಂತೆ ತಪ್ಪಿಸಿದರು ಎಂದು ನೇರ ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಗ್ರಾ.ಪಂ ಅಧ್ಯಕ್ಷೆ ಸುಶೀಲ, ಆಧಾರ್ ತಿದ್ದುಪಡಿ ಆಲಂಕಾರು ಆಂಚೆ ಕಛೇರಿಯಲ್ಲಿ ನಡೆಯುತ್ತಿದೆ.ನೀವು ನಮ್ಮ ಗಮನಕ್ಕೆ ಬಾರದೇ ಅಧಾರ್ ತಿದ್ದುಪಡಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದಿರಿ ಎಂದು ಉತ್ತರಿಸಿದರು.ಇದರಿಂದ ಸಮಾದಾನಗೊಳ್ಳದ ಗ್ರಾಮಸ್ಥ ಅಬೂಬಕ್ಕರ್ ನೆಕ್ಕರೆ, ನಾವು ಗ್ರಾ.ಪಂ ಮನವಿ ನೀಡಿಯೇ ಆಧಾರ್ ಕ್ಯಾಂಪ್ ಆಯೋಜನೆ ಮಾಡಿದ್ದು ಇದಕ್ಕೆ ಬೇಕಾದ ದಾಖಲೆ ನನ್ನಲಿದೆ ಎಂದರು. ನಂತರ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಗ್ರಾಮಸ್ಥರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ರವರು ಮಾತನಾಡಿ, ಗ್ರಾಮಸ್ಥರ ಕೋರಂ ಇಲ್ಲದೇ ಗ್ರಾಮಸಭೆ ಮಾಡುವುದು ಸರಿಯಲ್ಲ ಎನ್ನುವಂತದ್ದು ಸತ್ಯ ಆದರೆ ಆಯಾಯ ಭಾಗದ ಜನಪ್ರತಿನಿಧಿಗಳು ಕನಿಷ್ಠ 10 ಮಂದಿಯನ್ನು ಗ್ರಾಮಸಭೆಗೆ ಕರೆತರುವಂತೆ ಕೆಲಸ ಕಾರ್ಯವನ್ನು ನಿರ್ವಹಿಸಬೇಕೆಂದು ಸಲಹೆ ನೀಡಿ ಈ ಬಾರಿ ಗ್ರಾಮಸಭೆ ನಡೆಯಲಿ ಎಂದು ಅಧಿಕಾರಿಗಳಲ್ಲಿ ಮತ್ತು ಗ್ರಾಮಸ್ಥರಲ್ಲಿ ವಿನಂತಿಸಿದರು.

ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗಬೇಕಿದ್ದ ಗ್ರಾಮಸಭೆಯು ಚರ್ಚೆ,ಗೊಂದಲ ಮುಂದುವರಿದು ಬೆಳಿಗ್ಗೆ 11:30 ರ ಹೊತ್ತಿಗೆ ಪ್ರಾರಂಭವಾಯಿತು.

ಆರ್ಹ ಫಲಾನುಭವಿಗಳಿಗೆ ಗ್ರಾ.ಪಂ ವತಿಯಿಂದ ಸೈಟ್ ವಿತರಿಸಿ
ಆಲಂಕಾರು ಗ್ರಾ.ಪಂ ವತಿಯಿಂದ ಕಾದಿರಿಸಿದ ಗ್ರಾ.ಪಂ ಸೈಟ್ ನ್ನು ಅರ್ಹ ಪಲಾನುಭಿಗಳಿಗೆ ವಿತರಿಸುವಂತೆ ಗ್ರಾಮಸ್ಥರಾದ ಹರೀಶ್ ಏಂತಡ್ಕ,ಜನಾರ್ಧನಾ ಬಂಗೇರ,ಅಬೂಬಕ್ಕರ್ ನೆಕ್ಕರೆ ಯವರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಯಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ,ಕಾರ್ಯದರ್ಶಿ ವಸಂತ ಶೆಟ್ಟಿ ಯವರು ಅರ್ಧ ಫಲಾನುಭವಿಗಳಿಗೆ ಸೈಟ್ ವಿತರಿಸಲು ನಾವು ನಿಗಮಕ್ಕೆ ಕಳಿಸಿದ್ದೇವೆ ಆಲಂಕಾರು ಗ್ರಾ.ಪಂನಲ್ಲಿ ಇದೀಗಾಗಲೇ 18 ಮಂದಿಯ ಅರ್ಹಫಲಾನುಭವಿಗಳ ಪಟ್ಟಿ ಮಾಡಿ ನಿಗಮಕ್ಕೆ ಕಳಿಸಿದ್ದು, ಇದರಲ್ಲಿ ಒಟ್ಟು 32 ಮಂದಿ ಅರ್ಹರ ಪಟ್ಟಿಯನ್ನು ಕಳಿಸುವಂತೆ ನಿಗಮದವರು ತಿಳಿಸಿದ್ದು ಈ ಬಗ್ಗೆ ಇನ್ನೊಮ್ಮೆ ಪ್ರಯತ್ನಿಸುವುದಾಗಿ ತಿಳಿಸಿದರು.

ಆಲಂಕಾರಿನಲ್ಲಿ 110 ಕೆ.ವಿ.ಎ ಸಬ್ ಸ್ಟೇಷನ್ ನಿರ್ಮಾಣವಾಗಲಿ :
ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್‌ರವರು ಮಾಹಿತಿ ನೀಡಿ, ಸರಕಾರದ ಜನಪರ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿರುವ ಸಂಧರ್ಭದಲ್ಲಿ ಗ್ರಾಮಸ್ಥರಾದ ಜನಾರ್ಧನಾ ಬಂಗೇರ ಮಾತನಾಡಿ, ಸೋಲಾರ್ ದೀಪದ ಬದಲು ವಿದ್ಯುತ್ ದೀಪವನ್ನು ಅಳವಡಿಸಬೇಕು ಸೋಲಾರ್ ದೀಪ ಅಳವಡಿಸಿದರೆ ಒಂದು ವರ್ಷದಲ್ಲಿ ಹಾಳಗುತ್ತದೆ ಹಾಗೂ ಅದನ್ನು ಕಳ್ಳತನ ಮಾಡುತ್ತಾರೆ ಇದರಿಂದ ಗ್ರಾ.ಪಂ ಗೆ ತುಂಬಾ ನಷ್ಟ ಆಗುತ್ತದೆ ಆದ್ದರಿಂದ ಎಲ್ಲಾ ಕಡೆಗಳಲ್ಲಿ ವಿದ್ಯುತ್ ದೀಪ ಅಳವಡಿಸುವಂತೆ ವಿನಂತಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ ಆಡಳಿತ ಮಂಡಳಿ ನಾವು ವಿದ್ಯುತ್ ದೀಪಕ್ಕೆ ಕ್ರೀಯಾ ಯೋಜನೆ ಮಾಡಿ ಕಳಿಸಿದ್ದೇವೆ.ಆದರೆ ವಿದ್ಯುತ್ ಅಭಾವದಿಂದಾಗಿ ಸರಕಾರ ವಿದ್ಯುತ್ ದೀಪಕ್ಕೆ ಕ್ರೀಯಾ ಯೋಜನೆ ಯಲ್ಲಿ ಅನುಮತಿ ನೀಡಿಲ್ಲ ಎಂದು ಉತ್ತರಿಸಿದರು.

ಆಲಂಕಾರಿನಲ್ಲಿ ಉದ್ದೇಶಿತ 110 ಕೆ.ವಿ.ಎ ನಿರ್ಮಾಣದ ಕುರಿತು ಸೋಮಪ್ಪ‌ ನೆಕ್ಕರೆಯವರು ಪ್ರಶ್ನಿಸಿ, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗು ಮೆಸ್ಕಾಂ ಉತ್ಸುಕರಾಗಿದ್ದು, 110 ಕೆ.ವಿ.ಎ ಲೈನ್ ಬರಲು ಕೆಲವರ ಆಕ್ಷೇಪವಿರುವ ಕಾರಣ ಕೆಲಸ ವಿಳಂಬವಾಗಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಅತಿ ಅಗತ್ಯ ಎಂದು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ ತಿಳಿಸಿದರು.ಈ ಬಗ್ಗೆ ಆಲಂಕಾರಿನಲ್ಲಿ ಉದ್ದೇಶಿತ 110 ಕೆ.ವಿ.ಎ ನಿರ್ಮಾಣಕ್ಕೆ ಲೈನು ಬರಲು ಜಿಲ್ಲಾಧಿಕಾರಿಗಳು ನೇರ ಪ್ರವೇಶಿಸಬೇಕು ವಿದ್ಯುತ್ ‌ಲೈನ್ ಬರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದಾಗಿ ಸೋಮಪ್ಪ ನೆಕ್ಕರೆ ಸಭೆಯಲ್ಲಿ ತಿಳಿಸಿದರು.

ಗ್ರಾಮಾಡಳಿತಾಧಿಕಾರಿ ಪ್ರೇಮಲತಾ ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡಿ ಕಂದಾಯ ಇಲಾಖೆಯ ದಾಖಲೆಗಳು ಡಿಜಿಟಲೀಕರಣವಾಗುವುದಿಂದ ಹೆಚ್ಚಿನ ಸಮಯ ಕಡಬ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಆದ್ದರಿಂದ ಗ್ರಾಮಸ್ಥರು ಸಹಕರಿಸುವಂತೆ ವಿನಂತಿಸಿದರು. ಇದೇ ಸಂಧರ್ಭದಲ್ಲಿ ಕೇಂದ್ರ ಸರಕಾರದ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಿಲು ಸರಕಾರದ ವತಿಯಿಂದ ಏನಾದರೂ ಅದೇಶ ಬಂದಿದೆಯಾ ಎಂದು ಗ್ರಾಮಸ್ಥರರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ರವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಆಡಳಿತಾಧಿಕಾರಿ ಪ್ರೇಮಲತಾ ರವರು ಈ ಬಗ್ಗೆ ಯಾವುದೇ ಆದೇಶ‌ ಸರಕಾರದ ವತಿಯಿಂದ ಬಂದಿಲ್ಲ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಸಿ.ಎಚ್.ಒ ಬೀನ್ಸಿಯವರು ಆರೋಗ್ಯ ಇಲಾಖೆಯ ಬಗ್ಗೆ ಮಾಹಿತಿ ನೀಡಿ ,ಕ್ಷಯ ಮುಕ್ತ ಭಾರತ ನಿರ್ಮಾಣವಾಗಬೇಕು ಈ ದಿಶೆಯಲ್ಲಿ ಎಲ್ಲರು ಸಹಕರಿಸುವಂತೆ ವಿನಂತಿಸಿದರು.

ಪಂಚಾಯತ್‌ರಾಜ್ ಇಲಾಖೆಯ ಇಂಜಿನಿಯರ್ ಕುಶಕುಮಾರ್ ರವರು ತಾ.ಪಂ ಅನುದಾನದಲ್ಲಿ‌ ಆಗುತ್ತಿರುವ‌ ಕೆಲಸ ಕಾರ್ಯಗಳ ಬಗ್ಗೆ ತಿಳಿಸುವ ಸಂಧರ್ಭದಲ್ಲಿ ಮಿತ್ತನಡ್ಕ ಎಂಬಲ್ಲಿನ ಕಾಂಕ್ರೀಟ್ ಕರಣ 6 ತಿಂಗಳಿನಲ್ಲಿ ಎದ್ದು ಹೋಗಿದೆ ಎಂದು ಸಂದೀಪ್ ಪಂಜೋಡಿ,ಚಂದ್ರಶೇಖರ ಬೈಲಕೆರೆ ಯವರು ತಿಳಿಸಿದರು. ಶರವೂರು ಅಂಗನವಾಡಿಯಲ್ಲಿ‌ ನಿರ್ಮಾಣಗೊಂಡ ಶೌಚಾಲಯದ ಬಗ್ಗೆ ಬಹಳ ಗೊಂದಲ ನಿರ್ಮಾಣವಾಗಿ ಗ್ರಾ.ಪಂ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಮಾತಿನ ಚಕಮಕಿ ನಡೆದು ಅಂಗನವಾಡಿ ಶಾಲೆಗೆ ಕಂಪೌಂಡು ನಿರ್ಮಾಣ ಮಾಡುವ ಕುರಿತು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇದೇ ಸಂಧರ್ಭದಲ್ಲಿ ಕೇಶವ ದೇವಾಡಿಗ ನಗ್ರಿ,ಸುಂದರ ಬೈಲಕೆರೆಯವರು ಶರವೂರು, ನಗ್ರಿ ರಸ್ತೆ ಕಾಂಕ್ರಿಟೀಕರಣ ಮಾಡಬೇಕೆಂದು ಒತ್ತಾಯಿಸಿದರು. ಜನಾರ್ಧನ ಬಂಗೇರ ಧ್ವನಿಗೂಡಿಸಿ ನಮ್ಮ ಭಾಗದ ಶಾಸಕರಲ್ಲಿ ಒತ್ತಡ ಹೇರಿ ನಮ್ಮ ಭಾಗಕ್ಕೆ ಹೆಚ್ಚು ಅನುದಾನ ಬರುವಂತೆ ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕೆಂದು ತಿಳಿಸಿದರು.


ಶಿಕ್ಷಣ ಇಲಾಖೆಯಿಂದ ಸಿ.ಆರ್.ಪಿ ಜಯಂತ್ ವೈ ಯವರು ಮಾತನಾಡಿ, ಶಿಕ್ಷಣ ಇಲಾಖೆಯ ಒಂದು ದೇಶ ಒಂದು ಐ.ಡಿ ಕಾರ್ಡ್ ಎಂದು ಕರೆಯಲ್ಪಡುವ ಆಪಾರ್ ಐ ಡಿ ಕಾರ್ಡ್ ನ ಬಗ್ಗೆ ಮಾಹಿತಿ ನೀಡಿ ಶಾಲಾ ದಾಖಲಾತಿ ಇದ್ದ ಹಾಗೆ ಅಧಾರ್ ನ್ನು ವಿದ್ಯಾರ್ಥಿಗಳು ಸರಿ ಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ಯಾವೂದೇ ವಿದ್ಯಾರ್ಥಿ ಅಪಾರ್ ಐ.ಡಿ ಕಾರ್ಡ್ ಹೊಂದಿದ್ದರೆ ಬಹಳ ಸುಲಭವಾಗಿ ವಿದ್ಯಾರ್ಥಿಗಳನ್ನು ಪತ್ತೆ ಮಾಡಲು ಅಪಾರ್ ಐ.ಡಿ ಕಾರ್ಡ್ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಸಹಕರಿಸುವಂತೆ ವಿನಂತಿಸಿದರು.

ಶಿಶುಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಭವಾನಿ, ಪಶುಸಂಗೋಪನೆ ಇಲಾಖೆಯ ಅಜಿತ್,ಸಮಾಜ ಕಲ್ಯಾಣ ಇಲಾಕೆಯ ಲೋಕೇಶ್ ಇಲಾಖಾವಾರು ಮಾಹಿತಿ ನೀಡಿದರು. ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿ ಪುತ್ತೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರೇಖಾರವರು ಎಲೆಚುಕ್ಕಿರೋಗ,ಹಳದಿರೋಗ ಹಾಗೂ ಇನ್ನೀತರ ಕೃಷಿಗೆ ಬಾದಿಸುವ ರೋಗಗಳ ಬಗ್ಗೆ ಮಾಹಿತಿ ನೀಡಿ ಇದರ ಹತೋಟಿಯ ಬಗ್ಗೆ ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಸ್ವಾಗತಿಸಿ, ಕಾರ್ಯದರ್ಶಿ ವಸಂತ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷರಾದ ಸುಶೀಲ, ಪಂಚಾಯತ್ ಉಪಾಧ್ಯಕ್ಷ ರವಿ ಪೂಜಾರಿ ಕೆ, ಪಂಚಾಯತ್ ಸದಸ್ಯರಾದ ಸದಾನಂದ ಆಚಾರ್ಯ, ಚಂದ್ರಶೇಖರ, ಶ್ವೇತಾ ಕುಮಾರ್, ಕೃಷ್ಣ ಗಾಣಂತಿ, ರೂಪಾಶ್ರೀ, ವಾರಿಜ, ಸುಮತಿ, ಸುನಂದ ಬಾರ್ಕುಳಿ, ಶಾರದ, ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ, ಕಡಬ ಠಾಣೆಯ ಆಲಂಕಾರು ಬೀಟ್ ಪೊಲೀಸ್, ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here