ಪುತ್ತೂರು: ಉತ್ತರಾಖಂಡ್ ಶಿವಪುರಿ, ಋಷಿಕೇಶದಲ್ಲಿ ನಡೆಯಲಿರುವ ಬೀಚ್ ರಾಷ್ಟ್ರೀಯ ಕ್ರೀಡಾಕೂಟಗಳ ವಾಲಿಬಾಲ್ ಪಂದ್ಯಾಟದ ತಾಂತ್ರಿಕ ಸಮಿತಿಯ ಸದಸ್ಯರಾಗಿ ಮಾಜಿ ರಾಷ್ಟ್ರೀಯ ತರಬೇತುದಾರ ಪುತ್ತೂರು ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಮ್ಯಾನೇಜಿಂಗ್ ಟ್ರಸ್ಟಿ ಪಿ.ವಿ.ನಾರಾಯಣ್ ಅವರು ನೇಮಕಗೊಂಡಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟ ಬೀಚ್ ವಾಲಿಬಾಲ್ ಸ್ಪರ್ಧೆಯ ಸಂಚಾಲಕ ಎಂ.ಪ್ರಭಾಹರನ್ ಅವರು ಪಿ.ವಿ.ನಾರಾಯಣ್ ಅವರಿಗೆ ನೇಮಕದ ಆದೇಶ ನೀಡಿ , ಫೆ.1ರ ಒಳಗೆ ಸದಸ್ಯತನ ಲಭ್ಯತೆಯನ್ನು ಖಚಿತಪಡಿಸುವಂತೆ ತಿಳಿಸಿದ್ದಾರೆ.