ಜ.25:ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ | ಫೆ.2 ಚುನಾವಣೆ, ಫಲಿತಾಂಶ ಘೋಷಣೆ
ಪುತ್ತೂರು: ಕೋರ್ಟ್‌ರಸ್ತೆ ವಿಶ್ವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆ ನಡೆಸುವ ಸಲುವಾಗಿ ಸಾಮಾನ್ಯ/ಹಿಂದುಳಿದ ವರ್ಗ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಮಹಿಳಾ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಈಗಾಗಲೇ ಅಧಿಕೃತವಾಗಿ ಹೊರಡಿಸಲಾಗಿದೆ.
ಒಟ್ಟು 13 ಸ್ಥಾನಗಳಿದ್ದು ಅದರಲ್ಲಿ ಸಾಮಾನ್ಯ ಸ್ಥಾನ 7, ಹಿಂದುಳಿದ ಪ್ರವರ್ಗ ‘ಎ’ ಮೀಸಲು ಸ್ಥಾನ 1, ಪರಿಶಿಷ್ಟ ಜಾತಿ ಮೀಸಲು ಸ್ಥಾನ 1, ಪರಿಶಿಷ್ಟ ಪಂಗಡ ಮೀಸಲು ಸ್ಥಾನ 1, ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ಸ್ಥಾನ 1 ಹಾಗೂ ಮಹಿಳಾ ಮೀಸಲು ಸ್ಥಾನ 2 ಇವುಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಲಿರುವುದು. ಚುನಾವಣಾ ಪ್ರಕ್ರಿಯೆ ಫೆ.2 ರಂದು ಬೆಳಿಗ್ಗೆ ಗಂಟೆ 9ರಿಂದ ಅಪರಾಹ್ನ 4ರ ವರೆಗೆ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆಯಲಿರುವುದು.
ಜ.25:ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ:
ಈಗಾಗಲೇ ಆಕಾಂಕ್ಷೆವುಳ್ಳ ಆಭ್ಯರ್ಥಿಗಳಿಂದ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಸ್ಪರ್ಧಿಸಲು ಇಚ್ಚಿಸುವಂತಹ ಆಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿರುತ್ತದೆ. ಜ.26 ರಂದು ನಾಪತ್ರಗಳ ಪರಿಶೀಲನೆ, ಅದೇ ದಿನ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಆಭ್ಯರ್ಥಿಗಳ ಪಟ್ಟಿಯ ಪ್ರಕಟಣೆಯಾಗಲಿದೆ. ಜ.27 ರಂದು ಉಮೇದುವಾರರಿಂದ ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು ಜೊತೆಗೆ ಸಿಂಧುತ್ವ ಹೊಂದಿರುವ ಆಭ್ಯರ್ಥಿಗಳ ಪಟ್ಟಿಯ ಪ್ರಕಟಣೆ, ಆಭ್ಯರ್ಥಿಗಳ ಪಟ್ಟಿ ಪ್ರಕಟಣೆಯಾದ ಬಳಿಕ ಆಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆಯಾಗಲಿದೆ. ಜ.29 ರಂದು ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಣೆಯಾಗಲಿದ್ದು, ಫೆ.2 ರಂದು ಚುನಾವಣೆ, ಮತ ಎಣಿಕೆ ಬಳಿಕ ಫಲಿತಾಂಶ ಘೋಷಣೆಯಾಗಲಿದೆ ಎಂದು ರಿಟರ್ನಿಂಗ್ ಆಫೀಸರ್ ಶೋಭಾ ಎನ್.ಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.