ಪುತ್ತೂರು: ಮೆಸ್ಕಾಂನಿಂದ ವಿಶೇಷ ಕಂದಾಯ ವಸೂಲಾತಿ ಅಭಿಯಾನದ ಪ್ರಯುಕ್ತ ಈ ತಿಂಗಳಾಂತ್ಯದ ರಜಾದಿನಗಳಾದ ಜ.25ರ ನಾಲ್ಕನೇ ಶನಿವಾರ ಹಾಗೂ ಜ.26ರ ಆದಿತ್ಯವಾರದಂದು ಮೆಸ್ಕಾಂ ಕುಂಬ್ರ ಉಪವಿಭಾಗ ಕಚೇರಿಯಲ್ಲಿ ನಗದು ಮುಂಗಟ್ಟೆಯನ್ನು ( ಕ್ಯಾಶ್ ಕೌಂಟರ್) ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.
ಬಳಕೆದಾರರು ಈ ಸೌಲಭ್ಯವನ್ನು ಬಳಸಿಕೊಂಡು ವಿದ್ಯುತ್ ಬಿಲ್ ಗಳನ್ನು ಪಾವತಿಸುವಂತೆ ಕೋರಲಾಗಿದೆ. ನಿಗದಿತ ಅವಧಿಯೊಳಗಾಗಿ ಬಿಲ್ ಪಾವತಿಸದ ಗ್ರಾಹಕರ ಸ್ಥಾವರಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.