ಕುಂಬ್ರ: ಮಾನವ ಸರಪಳಿ ನಡೆಯಲಿರುವ ಮೈದಾನದತ್ತ ಜನರನ್ನು ಆಕರ್ಷಿಸುತ್ತಿದೆ ಬೃಹದಾಕಾರದ ಬಲೂನ್..!

0

ಪುತ್ತೂರು: ಎಸ್‌.ಕೆ.ಎಸ್‌.ಎಸ್‌.ಎಫ್ ದ.ಕ ಈಸ್ಟ್ ಜಿಲ್ಲೆ ವತಿಯಿಂದ ಜ.26ರಂದು ಕುಂಬ್ರದಲ್ಲಿ ಬೃಹತ್ ಮಾನವ ಸರಪಳಿ ನಡೆಯಲಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಂಘಟಕರು ಈಗಾಗಲೇ ವಿವಿಧ ರೀತಿಯ ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ಬೃಹತ್ ಗಾತ್ರದ ತ್ರಿವರ್ಣದ ಬಲೂನ್‌ವೊಂದನ್ನು ಜ.25ರಂದು ಸಂಜೆ ಅಳವಡಿಸಲಾಗಿದ್ದು ಇದು ಎಲ್ಲರನ್ನು ಆಕರ್ಷಿಸುತ್ತಿದೆ.

‘ಎಸ್‌.ಕೆ.ಎಸ್‌.ಎಸ್‌.ಎಫ್ ಮಾನವ ಸರಪಳಿ’ ಎಂದು ಬರೆದಿರುವ ತ್ರಿವರ್ಣದ ಬೃಹದಾಕಾರಣ ಬಲೂನು ನೋಡಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಕುಂಬ್ರದ ಮೈದಾನದತ್ತ ಧಾವಿಸಿದ್ದಾರೆ. ಬಲು ದೊಡ್ಡ ಬಲೂನ್ ಇದೀಗ ಎಲ್ಲರನ್ನು ಆಕರ್ಷಿಸುತ್ತಿದ್ದು ಕುಂಬ್ರದಲ್ಲಿ ಗಮನ ಸೆಳೆಯುತ್ತಿದೆ.

LEAVE A REPLY

Please enter your comment!
Please enter your name here