ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ “ಶೂನ್ಯ ಕಸ ನಿರ್ವಹಣೆ”ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಗ್ರಾಮವಿಕಾಸ ಸಮಿತಿ ಪಡ್ಡಾಯೂರು ಮತ್ತು ಪಡ್ನೂರು ಸ್ವಚ್ಛ ಭಾರತ ಅಭಿಯಾನದ ಸಹಯೋಗತ್ವದಲ್ಲಿ “ಶೂನ್ಯ ಕಸ ನಿರ್ವಹಣೆ” ಸ್ವಯಂ ಘೋಷಣೆ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿ ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಮಾತನಾಡಿ “ಪ್ಲಾಷ್ಟಿಕ್ ಎಷ್ಟು ಹಾನಿಕಾರಕ ಅಂತ ನಮಗೆಲ್ಲ ಗೊತ್ತಿದೆ. ಆದರೆ ಅದರ ಬಗ್ಗೆ ಶಿಸ್ತು ರೂಡಿಸುವ ಕಲ್ಚರ್ ನಮ್ಮಲ್ಲಿಲ್ಲ. ನಮ್ಮೆಲ್ಲರ ದೇಹದಲ್ಲಿ ಮಿಕ್ರೋ ಪ್ಲಾಷ್ಟಿಕ್ ಕಣಗಳು ತುಂಬಿ ಹೋಗಿದೆ. ಅದು ಕ್ಲಾಟಿಂಗ್ ಹಾಗೂ ಕ್ಯಾನ್ಸರ್ ದ ಬರಲೂ ಕಾರಣ ಅಗ್ತದೆ ಆದ್ದರಿಂದ ಪ್ಲಾಸ್ಟಿಕ್ ನ್ನು ನಿರ್ವಹಣೆ ಮಾಡುವುದು ಅತೀ ಅಗತ್ಯ. ಇದೊಂದು ಗ್ಲೋಬಲ್ ಚಾಲೆಂಜ್ ಎಂದು  ಹೇಳುತ್ತಾ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿದರು ಹಾಗೂ ಪ್ಲಾಸ್ಟಿಕ್ ಕಸದ ಸೃಷ್ಟಿಯನ್ನು ಕಡಿಮೆ ಮಾಡಬೇಕು. ಪ್ರತಿಯೊಂದು ಮನೆಯಲ್ಲೂ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ನಾವು ಮಾಡಬೇಕು” ಎಂದು ತಿಳಿಸಿದರು.

 ಮುಖ್ಯ ಅತಿಥಿ ಮಾಜಿ ಓಂಬುಡ್ಸ್ ಮೆನ್ಎನ್ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ“ಅಂತರಂಗ ಬಹಿರಂಗ ಶುದ್ಧತೆ ನಮ್ಮನ್ನು ದೈವತ್ವಕ್ಕೆ ಕೊಂಡೊಯ್ಯುತ್ತದೆ. ನಾವು ಮಾಲಿನ್ಯ ಮುಕ್ತ  ಭಾರತ ಕಟ್ಟಬೇಕು. ಅದಕ್ಕಾಗಿ ಮೊದಲು ನಮ್ಮ ಮನೆ, ಗ್ರಾಮ ಸ್ವಚ್ಛವಾಗಬೇಕು ಸ್ವಚ್ಛತೆಯೇ ನಮ್ಮ ಸಮೃದ್ಧಿ ಸಂಪೂರ್ಣ ಸ್ವಚ್ಛತೆ ನಮ್ಮ ಗುರಿಯಾಗಬೇಕು” ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮಹಾದೇವ ಶಾಸ್ತ್ರಿ ಮಾತನಾಡಿ “ವಿವೇಕಾನಂದ ಪಾಲಿಟೆಕ್ನಿಕ್ ಕೂಡ ತ್ಯಾಜ್ಯ ನಿರ್ವಹಣೆಯಲ್ಲಿ ತನ್ನ ಕೈಜೋಡಿಸಿದೆ.  ವಿದ್ಯಾರ್ಥಿಗಳಾದ ನೀವು ಕೂಡ ನಿಮ್ಮ ನಿಮ್ಮ ಮನೆಗಳಲ್ಲಿ ಕಸದ ನಿರ್ವಹಣೆ ಮಾಡವಲ್ಲಿ ಭಾಗಿಗಳಾಗಿ” ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ,ಪಡ್ನೂರು ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಶ್ರೀನಿವಾಸ ಪೆರುವೋಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿ ಮನೆ ಹಾಗೂ ಈಶ್ವರ ಚಂದ್ರ ಭಾಗವಹಿಸಿದ್ದರು.ಪ್ರಾಂಶುಪಾಲ ಮುರಳೀಧರ್ ಯಸ್ ಸ್ವಾಗತಿಸಿದರು. ವಿದ್ಯಾರ್ಥಿ ನಿಯರಾದ ಸುಜನ್ಯ ತಂಡದವರು ಪ್ರಾರ್ಥಿಸಿದರು. ಆಟೋಮೊಬೈಲ್ ವಿಭಾಗದ ಉಪನ್ಯಾಸಕ ವಿನ್ಯಾಸ್ ವಂದಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here