ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ಸಮಿತಿಯ 3ನೇ ಸಭೆ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ಸಮಿತಿಯ 3ನೇ ಸಭೆ ಜ.26ರಂದು ನಡೆಯಿತು.

ಸಭೆಯಲ್ಲಿ ಕಳೆದ ತಿಂಗಳು ಆಡಳಿತ ಮಂಡಳಿಗೆ ನೀಡಿದ ಮನವಿಯ ಬಗ್ಗೆ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರ ಮನವಿಯಂತೆ ಅನ್ನಪ್ರಸಾದ ಸೇವೆಗೆ ಸಮಿತಿಯಿಂದ ಸಂಗ್ರಹವಾದ ಮೊತ್ತ ರೂ. 1.25ಲಕ್ಷವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

ದೇಣಿಗೆ ಸ್ವೀಕರಿಸಿದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಮುಂದೆಯೂ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಂರಕ್ಷಣಾ ಸಮಿತಿಯವರು ಸಹಕರಿಸಬೇಕು. ಹಾಗೂ ಸಮಿತಿಯ ಸಲಹೆಯನ್ನು ಪರಿಗಣಿಸುವುದಾಗಿ ಅವರು ತಿಳಿಸಿದರು.


ಡ್ರೆಸ್‌ಕೋಡ್, ದೇವಸ್ಥಾನದ ಹೊರಾಂಗಣದಲ್ಲಿ ಪಾದರಕ್ಷೆ ನಿರ್ಬಂಧಕ್ಕೆ ಮನವಿ:
ಸಭೆಯ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯ ಕಚೇರಿಗೆ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳೊಂದಿಗೆ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ವಿನಯ ಸುವರ್ಣ ಹಾಗೂ ವ್ಯವಸ್ಥಾಪಕ ಹರೀಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಂರಕ್ಷಣಾ ಸಮಿತಿಯಿಂದ ಕಳೆದ ಸಭೆಯಲ್ಲಿ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಅಳವಡಿಕೆ ಮತ್ತು ದೇವಸ್ಥಾನದ ಹೊರಾಂಗಣದಲ್ಲಿ ಪಾದರಕ್ಷೆ ಹಾಕದಂತೆ ನಿರ್ಬಂಧ ವಿಧಿಸುವಂತೆ ಸಲ್ಲಿಸಲಾಗಿರುವ ಮನವಿಯ ಕುರಿತು ಚರ್ಚಿಸಲಾಗಿದ್ದು ಇದರ ಬಗ್ಗೆ ಒಂದು ವಾರದೊಳಗೆ ಪತ್ರಿಕೆಯಲ್ಲಿ ಪ್ರಕಟಣೆಯನ್ನು ನೀಡುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಭರವಸೆ ನೀಡಿದರು.


ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ, ಕೃಷ್ಣ ನಾಯ್ಕ ಪರ್ಲಡ್ಕ, ಲೋಕೇಶ್ ಹೆಗ್ಡೆ, ಗೋಪಾಲ್ ಎಂ.ಆರ್., ದಿನೇಶ್ ಹೆಗ್ಡೆ, ಬಾಬಾ ಪ್ರಕಾಶ್ ಶೆಟ್ಟಿ, ಮೋನಪ್ಪ ಗೌಡ, ಚೇತನ್ ಭರತ್‌ಪುರ, ಶಿವು ಸಾಲ್ಯಾನ್, ಮಾಧವ ಸ್ವಾಮಿ, ಪದ್ಮಯ್ಯ ಗೌಡ ಕಡ್ಯ, ರತ್ನಾ ನಾಯರ್, ಶೈಲೇಶ್, ಮಹೇಶ್ ಕುಮಾರ್ ಪುತ್ತೂರು, ಸಂದೇಶ್ ನಾಯ್ಕ್ ಕೆಯ್ಯೂರು, ಮಹಾಬಲ, ಕಿರಣ್ ಕುಮಾರ್, ವೇಣುಗೋಪಾಲ್ ಮಣಿಯಾಣಿ, ಪ್ರಸಾದ್ ರೈ, ಶ್ರೀಧರ ಹಾಗೂ ಶಿವಾನಂದ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here