ಸವಣೂರು: ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳಿಗೆ ಪೌಂಡೇಶನ್ ಇದ್ದಂತೆ. ಪ್ರಾಥಮಿಕ ಹಂತದ ಶಿಕ್ಷಣದ ಗುಣಮಟ್ಟವನ್ನು ಹೊಂದಿಕೊಂಡು ಮಗು ಬೆಳೆಯುತ್ತದೆ. ಆ ರೀತಿಯಲ್ಲಿ ಇವತ್ತಿನ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಆಗಬೇಕಾಗಿದೆ. ಆ ಮುಖಾಂತರ ಮಕ್ಕಳು ಜೀವನದಲ್ಲಿ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯವಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಸವಣೂರು ಮೊಗರು ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಸವಣೂರು ಮೊಗರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಪ್ತತಿ ಸಂಭ್ರಮ, ಶಂಕುಸ್ಥಾಪನೆ, ದತ್ತಿನಿಧಿ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಮನೋಭಾವ, ಒಂದಷ್ಟು ಪರಿಸರವನ್ನು ಪ್ರೀತಿಸುವ ಗುಣ, ಗುರು ಹಿರಿಯರನ್ನು ಗೌರವಿಸುವ ಗುಣ ಹೊಂದಿರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾ. ಪಂ. ಅಧ್ಯಕ್ಷೆ ಸುಂದರಿ ಬಿ. ಎಸ್ ವಹಿಸಿದ್ದರು. ಸವಣೂರು ಗ್ರಾ. ಪಂ. ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್ ಕೆನರಾ, ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ ವೈ, ಸವಣೂರು ಗ್ರಾ.ಪಂ. ಪಿಡಿಓ ಸಂದೇಶ್ ಕೆ. ಎಸ್, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಗಂಗಾಧರ್ ಪೆರಿಯಡ್ಕ, ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ ನ ರಂಝಿ ಮುಹಮ್ಮದ್, ಜಿ.ಪಂ. ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಉದ್ಯಮಿ ಅಬ್ದುಲ್ ಸಮದ್ ಸೋಂಪಾಡಿ, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಹಾಜಿ ಆರ್ತಿಕೆರೆ, ಕಡಬ ತಾಲೂಕು ರೈತ ಸಂಘದ ಅಧ್ಯಕ್ಷ ಯತಿಂದ್ರ ಶೆಟ್ಟಿ ಮಠ, ಶಾಲಾ ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿಸೋಜ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷ ಝಕಾರಿಯಾ ಮಾಂತೂರು ಎಸ್ಡಿಎಂ ಸಿ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಎಸ್. ಡಿ.ಎಂ. ಸಿ ರಫೀಕ್ ಎಂ. ಎ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಗುಲ್ಸನ್ ಕೌಸರ್, ಅತಿಥಿ ಶಿಕ್ಷಕಿ ದಯಾಮಣಿ ಕಾರ್ಯಕ್ರಮ ನಿರೂಪಿಸಿದರು ಹಿರಿಯ ಶಿಕ್ಷಕಿ ಜಾನಕಿ ಧನ್ಯವಾದ ಗೈರು, ಶಿಕ್ಷಕಿಯರಾದ ಸವಿತಾ, ಸುನಿತಾ ಸಹಕರಿಸಿದರು, . ಬಳಿಕ ಅಂಗನವಾಡಿ ಕೇಂದ್ರದ ಮಕ್ಕಳಿಂದ ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಂಕುಸ್ಥಾಪನೆ:
ಈ ಸಂದರ್ಭದಲ್ಲಿ ನೂತನ ಅಕ್ಷರ ದಾಸೋಹ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು.
ಸನ್ಮಾನ:
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಒಳಮೊಗ್ರು ಪಂಚಾಯತ್ ಪಿಡಿಓ ಮನ್ಮಥ ಎ, ಆರ್ಯಾಪು ಶಾಲಾ ಶಿಕ್ಷಕಿ ಕವಿತಾ, ಕೋಡಿಂಬಾಡಿ ಶಾಲಾ ಶಿಕ್ಷಕಿ ಶ್ವೇತಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಶಾರದಾ, ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ದಯಾಮಣಿ, ಶ್ವೇತಾ ,ಅತಿಥಿ ಶಿಕ್ಷಕಿ ಪೂರ್ಣಿಮಾ, ಅಡುಗೆ ಸಿಬ್ಬಂದಿ ಸುಂದರಿ,ಅಜಿಲಾಡಿ ಬೀಡು ಸದಾಶಿವ ರೈ ಸೋಂಪಾಡಿ ಗುತ್ತು, ನಿವೃತ ಮುಖ್ಯಗುರು ರಾಮ ಭಟ್ ಕುಕ್ಕುಜೆ, ಮಾಜಿ ಅದ್ಯಕ್ಷೆ ದಿವ್ಯಲತಾ ಅವರನ್ನು ಸನ್ಮಾನಿಸಲಾಯಿತು.