ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಎಲ್ಲಾ 11 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 11 ಸ್ಥಾನಗಳನ್ನು ಹೊಂದಿರುವ ಸಹಕಾರಿ ಸಂಘದಲ್ಲಿ ಸಾಮಾನ್ಯ ಸ್ಥಾನದಿಂದ ಹಾಲಿ ಉಪಾಧ್ಯಕ್ಷ ದಾಮೋದರ ಕುಲಾಲ್, ಹಾಲಿ ನಿರ್ದೇಶಕರಾದ ನಾಗೇಶ್ ಕುಲಾಲ್, ಪದ್ಮ ಕುಮಾರ್ ಎಚ್, ಬಿ.ಎಸ್ ಕುಲಾಲ್, ಸೇಸಪ್ಪ ಕುಲಾಲ್, ಗಣೇಶ್ ಪಿ., ಹಿಂದುಳಿದ ವರ್ಗ ‘ಎ’ ಸ್ಥಾನದಿಂದ ಹಾಲಿ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ, ‘ಡಿ’ ವರ್ಗದಿಂದ ಪ್ರಶಾಂತ್ ಬಂಜನ್ ಪುನರಾಯ್ಕೆಯಾಗಿದ್ದಾರೆ.
ಮಹಿಳಾ ಸ್ಥಾನದಿಂದ ರಂಜಿತ, ರೇಖಾ ದಿನೇಶ್ ಹಾಗೂ ಸಾಮಾನ್ಯ ಸ್ಥಾನದಿಂದ ಪೂವಪ್ಪ ಕಡಂಬಾರ್ ನೂತನವಾಗಿ ಆಯ್ಕೆಯಾಗಿದ್ದಾರೆ.
ಸಂಘದ 11 ಸ್ಥಾನಗಳಿಗೆ ಒಟ್ಟು 16 ನಾಮಪತ್ರ ಸಲ್ಲಿಕೆಯಾಗಿತ್ತು. ಈ ಪೈಕಿ ಯಶವಂತ ಕಟ್ಟೆಯವರು 2 ನಾಮಪತ್ರ ಸಲ್ಲಿಸಿದ್ದರು. ಯಶವಂತ ಕಟ್ಟೆ, ಕೆ.ವಿಶ್ವನಾಥ ಮೂಲ್ಯ ರಾಮಕುಂಜ ಹಾಗೂ ಜನಾರ್ದನ ನೆಹರುನಗರ ಅವರು ಸಲ್ಲಿದ್ದ ನಾಮಪತ್ರದಲ್ಲಿ ಸೂಚಕರ ಹೆಸರು ಅರ್ಹ ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ 4 ನಾಮಪತ್ರಗಳು ತಿರಸ್ಕೃತಗೊಂಡಿದೆ. ಪ್ರಕಾಶ್ ಮುಕ್ವೆಯವರ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಎಸ್.ಎಂ ರಘು ಚುನಾವಣಾಧಿಕಾರಿಯಾಗಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಹಾಗೂ ಸಿಬಂದಿಗಳು ಸಹಕರಿಸಿದರು.