ಪುತ್ತೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೊಳುವಾರು ಶಾಖೆ ಪ್ರಭು ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.27ರಂದು ಶುಭಾರಂಭಗೊಂಡಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ವಲಯ ಕಛೇರಿ ಮುಖ್ಯಸ್ಥೆ ರೇಣು ನಾಯರ್ ರಿಬ್ಬನ್ ಕತ್ತರಿಸಿ ಬಳಿಕ ದೀಪ ಪ್ರಜ್ವಲಿಸಿ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪುತ್ತೂರು ನನಗೆ ಹೊಸದಲ್ಲ. ಹಲವು ಬಾರಿ ಬಂದಿದ್ದೇನೆ. ಇದು ನನ್ನ ಕರ್ಮಭೂಮಿ, ಕೇರಳ ನನ್ನ ಜನ್ಮಭೂಮಿ. ಮಂಗಳೂರು ಎಂಬುದು ಕೂಡ ಉತ್ತಮವಾದ ಸ್ಥಳ. ಇಲ್ಲಿನ ಜನರು ತುಂಬಾ ಒಳ್ಳೆಯವರು. ಇಲ್ಲಿರುವ ದೇವಸ್ಥಾನಗಳು, ಸಂಸ್ಕೃತಿ ನನಗೆ ಇಷ್ಟ ಎಂದರು. ಬೊಳುವಾರು ಶಾಖೆಯ ವ್ಯವಹಾರ ಈ ವರ್ಷಾಂತ್ಯಕ್ಕೆ 300 ಕೋಟಿಗೆ ಮೀರಬೇಕು. ಇದಕ್ಕಾಗಿ ನಿಮ್ಮೆಲ್ಲರ ಸಹಕಾರಬೇಕು. ಅಲ್ಲದೆ ಬ್ಯಾಂಕ್ನಿಂದ ಸಾಮಾಜಿಕ ಸೇವೆಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ ಎಂದು ಹೇಳಿದ ಅವರು ಬ್ಯಾಂಕ್ನ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.
ಮುಖ್ಯ ಅತಿಥಿ ಪುತ್ತೂರಿನ ನೂತನ ಸಹಾಯಕ ಆಯುಕ್ತ ಶ್ರವಣ್ ಕುಮಾರ್ ಮಾತನಾಡಿ ನಾನು ಪುತ್ತೂರಿಗೆ ಇಂದು ಬಂದಿದ್ದೇನೆ. ನನ್ನ ಕರ್ತವ್ಯದ ಮೊದಲನೇ ದಿನವೇ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಬುದು ಉತ್ತಮ ಬ್ಯಾಂಕ್ ಆಗಿದೆ. ಸಮಾಜಕ್ಕೆ ಗಾಹಕರಿಗೆ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೊಳುವಾರು ಶಾಖೆ ಸ್ಥಳಾಂತರಗೊಂಡು ವ್ಯವಸ್ಥಿತವಾಗಿ ಸಿದ್ಧಗೊಂಡಿದೆ. ಹಲವು ವರ್ಷದಿಂದ ನಾನೂ ಕೂಡ ಇಲ್ಲಿನ ಗ್ರಾಹಕನಾಗಿದ್ದೇನೆ. ಇಲ್ಲಿಗೆ ಕನ್ನಡ ಮಾತನಾಡುವ ಮ್ಯಾನೇಜರ್ ಬರಬೇಕು. ಇದರಿಂದ ನನ್ನಂತಹ ಕೃಷಿಕರಿಗೆ ವ್ಯವಹರಿಸಲು ಸುಲಭವಾಗುತ್ತದೆ. ಸಾಲಗಾರರನ್ನು ಬ್ಯಾಂಕ್ ಗೌರವಿಸಬೇಕು ಎಂದು ಹೇಳಿದರು.
ಕಟ್ಟಡದ ಮಾಲಕ ಕೆ.ವಿ. ಶಿವಾನಂದ ಪ್ರಭು ಮಾತನಾಡಿ ಈ ಕಟ್ಟಡಕ್ಕೆ ಬ್ಯಾಂಕ್ ಶಾಖೆ ಬಂದಿರುವುದು ತುಂಬಾ ಸಂತೋಷದಾಯಕವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿ ನಂಬರ್ ವನ್ ಬ್ರಾಂಚ್ ಎಂದು ಹೆಸರು ಪಡೆಯಲಿ ಎಂದರು. ಮಂಗಳೂರು ಪ್ರಾದೇಶಿಕ ಕಛೇರಿ ಮುಖ್ಯಸ್ಥ ಎ.ರಾಜಾಮಣಿ ಮಾತನಾಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉತ್ತಮ ಯೋಜನೆ, ಸೌಲಭ್ಯಗಳಿವೆ. ಎಲ್ಲಾ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಬೊಳುವಾರು ಶಾಖಾ ಪ್ರಬಂಧಕ ಕೆ.ಟಿ.ವೈರ ಕುಮಾರ್ ಸ್ವಾಗತಿಸಿ, ಸಿಬ್ಬಂದಿ ದೀಪಕ್ ವಂದಿಸಿದರು. ಮಂಗಳೂರು ಕ್ಷೇತ್ರದ ಮ್ಯಾನೇಜರ್ ನಿಖಿತ್ ಶ್ರೀಯಾನ್ ಮತ್ತು ಬೊಳುವಾರು ಶಾಖೆಯ ಸಹಾಯಕ ಪ್ರಬಂಧಕಿ ಉಮಾ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ
ಮುಖ್ಯ ಅತಿಥಿಗಳಾಗಿದ್ದ ಪುತ್ತೂರಿನ ನೂತನ ಸಹಾಯಕ ಆಯುಕ್ತ ಶ್ರವಣ್ ಕುಮಾರ್ ಮತ್ತು ಕಟ್ಟಡದ ಮಾಲಕ ಕೆ.ವಿ.ಶಿವಾನಂದ ಪ್ರಭುರವರನ್ನು ಬೊಳುವಾರು ಶಾಖೆಯ ವತಿಯಿಂದ ಶಾಲು, ಹಾರ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.