ಉಪ್ಪಿನಂಗಡಿ: ವಿವಿಧ ಸಂಘ- ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತಾನು ತೊಡಗಿಸಿಕೊಂಡಿದ್ದರೂ ಜೇಸಿಐಯ ಸಾರಥ್ಯ ವಹಿಸಿಕೊಂಡು ದುಡಿದ ಹೆಚ್ಚಿನ ಅನುಭವ ನನಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಜೇಸಿಐ ಮೂಲಕ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಲು ನಿಮ್ಮೆಲ್ಲರ ಸಹಕಾರವಿರಲಿ ಎಂದು ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ, ಉದ್ಯಮಿ ನಟೇಶ್ ಪೂಜಾರಿ ತಿಳಿಸಿದರು.
ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಉಪ್ಪಿನಂಗಡಿ ಜೇಸಿಐ ಘಟಕದ 2025ನೇ ಸಾಲಿನ ಅಧ್ಯಕ್ಷರಾಗಿ ಪದಪ್ರದಾನ ಸ್ವೀಕರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಜೇಸಿಐ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ನಾಯಕರಾಗಿ ಬೆಳೆಯಲು ವೇದಿಕೆ ಕಲ್ಪಿಸುವ ವಿಶೇಷ ಸಂಸ್ಥೆ ಜೇಸಿಐ ಆಗಿದೆ. ಈ ಸಂಸ್ಥೆಗಳಲ್ಲಿ ಯುವಜನತೆ ಸಕ್ರೀಯವಾಗಿ ಭಾಗವಹಿಸಿ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಪೂರ್ವ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಮಾತನಾಡಿ, ಜೇಸಿಐ ಸಂಸ್ಥೆ ಲಿಂಗ ಭೇದ ಮಾಡದೆ ಅತ್ಯುತ್ತಮ ವ್ಯಕ್ತಿತ್ವಗಳನ್ನು ಬೆಳೆಸಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜೇಸಿಐ ಸಂಸ್ಥೆ ಮಾರ್ಗದರ್ಶನ ನೀಡುತ್ತದೆ. ನಾಯಕತ್ವ ಗುಣವನ್ನು ಪಡೆಯುವುದರೊಂದಿಗೆ ಹಲವು ಸಮಾಜಮುಖಿ ಕೆಲಸಗಳನ್ನು ಈ ಸಂಸ್ಥೆಯ ಮೂಲಕ ಮಾಡಬಹುದು ಎಂದರು.
ಈ ಸಂದರ್ಭ ಕಾರ್ಯದರ್ಶಿಯಾಗಿ ಮಹೇಶ್ ಕೆ., ಉಪಾಧ್ಯಕ್ಷರಾಗಿ ಡಾ. ಆಶೀತ್ ಎಂ.ವಿ., ಡಾ. ನಿರಂಜನ್ ರೈ, ಗುಣಕರ ಅಗ್ನಾಡಿ, ಚಂದ್ರಶೇಖರ ಶೆಟ್ಟಿ, ಕುಶಾಲಪ್ಪ, ಜೊತೆ ಕಾರ್ಯದರ್ಶಿಯಾಗಿ ಸುಮನ್, ಕೋಶಾಧಿಕಾರಿಯಾಗಿ ಪುರುಷೋತ್ತಮ್ ಪಿ., ಮಹಿಳಾ ಜೇಸಿ ಅಧ್ಯಕ್ಷರಾಗಿ ಪ್ರಮೀಳಾ ಎ. ನಟೇಶ್ ಪೂಜಾರಿ, ಸಂಯೋಜಕಿಯಾಗಿ ವೀಣಾ ಪ್ರಸಾದ್ ಕಜೆ, ಜೆಜೆಸಿ ಅಧ್ಯಕ್ಷರಾಗಿ ಗೌತಮ್ ಗೌಂಡತ್ತಿಗೆ, ಜೆಜೆಸಿ ಸಂಯೋಜಕರಾಗಿ ಲಿಖಿತ್ ಪ್ರಸಾದ್, ಈವೆಂಟ್ ರಾಯಭಾರಿಯಾಗಿ ದಿವಾಕರ ಬಿ., ಸಾಂಸ್ಕೃತಿಕ ಸಂಯೋಜಕರಾಗಿ ಪುನೀತ್ ಎಂ., ಮಾಧ್ಯಮ ವರದಿಗಾರನಾಗಿ ವಿಜಯ ಕೆ., ವ್ಯವಹಾರ ಸಂಯೋಜಕರಾಗಿ ಸುಜೀತ್ ಪ್ರಸಾದ್, ನಿರ್ದೇಶಕರಾಗಿ ಅವನೀಶ್, ಮುರಳೀಧರ ಎ.ಎಸ್., ತುಷಾರ್ ಪದಪ್ರಧಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಜೇಸಿಐ ನಿಕಟಪೂವಾಧ್ಯಕ್ಷೆ ಲವೀನಾ ಪಿಂಟೋ, ನಿಕಟಪೂರ್ವ ಕಾರ್ಯದರ್ಶಿ ಸುರೇಶ್, ನಿಕಟಪೂರ್ವ ಜೆಜೆಸಿ ಅಧ್ಯಕ್ಷ ದೀಪಕ್ ಎಂ.ಕೆ., ಐಪಿಪಿ ಶೇಖರ ಗೌಂಡತ್ತಿಗೆ, ಜೇಸಿಗಳಾದ ಪ್ರಶಾಂತ್ ಕುಮಾರ್ ರೈ, ಡಾ. ರಾಜಾರಾಮ್ ಕೆ.ಬಿ., ರವೀಂದ್ರ ದರ್ಬೆ, ಮೋಹನಚಂದ್ರ ಎಂ.ಪಿ., ಹರೀಶ ನಾಯಕ್ ನಟ್ಟಿಬೈಲ್, ಜಯಾನಂದ ಕಲ್ಲಾಪು, ಚೇತನ್ ಆನೆಗುಂಡಿ, ಸಂದೀಪ್ ಪೂಜಾರಿ, ಡಾ. ಗೋವಿಂದ ಪ್ರಸಾದ್ ಕಜೆ, ಎ.ವಿ. ಕುಲಾಲ್, ಜಯಪ್ರಕಾಶ್ ಶೆಟ್ಟಿ, ಆನಂದ ರಾಮಕುಂಜ, ಪುರುಷೋತ್ತಮ ಮುಂಗ್ಲಿಮನೆ, ಮೋನಪ್ಪ ಗೌಡ ಪಿ., ವಿಜಯಕುಮಾರ್ ಕಲ್ಲಳಿಕೆ, ಪ್ರಮುಖರಾದ ಕೈಲಾರು ರಾಜಗೋಪಾಲ ಭಟ್, ಸುರೇಶ ಗೌಂಡತ್ತಿಗೆ ಮತ್ತಿತರರು ಉಪಸ್ಥಿತರಿದ್ದರು.