ಪುತ್ತೂರು: ಕಲ್ಪವೃಕ್ಷ ಫೈನಾನ್ಸ್ ಕಾರ್ಪೋರೇಷನ್ (ರಿ.) ನೂತನವಾಗಿ ಪುತ್ತೂರು ಮುಖ್ಯರಸ್ತೆಯ ಶಿವ ಆರ್ಕೇಡ್ ನಲ್ಲಿ ಜ.30 ರಂದು ಶುಭಾರಂಭಗೊಂಡಿತು.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿ ಅವರು ದೀಪಪ್ರಜ್ವಲಿಸಿ, ಸಂಸ್ಥೆಗೆ ಶುಭಹಾರೈಸಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಭದ್ರತಾ ಕೊಠಡಿಯನ್ನು ಹಿರಿಯ ನ್ಯಾಯವಾದಿ ನರಸಿಂಹ ಪ್ರಸಾದ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಸ್.ಐ ಆಂಜನೇಯ ರೆಡ್ಡಿ, ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ರೈ, ಕಟ್ಟಡ ಮಾಲಕರಾದ ರೋಶನ್ ರೈ, ಪ್ರವೀಣ ಶೆಟ್ಟಿ, ಉಮೇಶ ನಾಯ್ಕ, ಗೋಪಾಲಕೃಷ್ಣ, ರವಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಉಮೇಶ ಗೌಡ, ಮೀನಾಕ್ಷಿ ಗೌಡ, ಮಾಧವ ಗೌಡ ಕಾಮಧೇನು, ದಿವ್ಯಪ್ರಭಾ ಗೌಡ ಚಿಲ್ತಡ್ಕ, ವಿದ್ಯಾ, ಪರಶುರಾಮ, ಸ್ಪರ್ಷಿತ್ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಸ್ಪಂದನಾ ಕಾಮಧೇನು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.