ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

0

ನೆಲ್ಯಾಡಿ: ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ನೇಮೋತ್ಸವ ಜ.30ರಂದು ನಡೆಯಿತು.


ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ.ಯು.ಪದ್ಮನಾಭ ತಂತ್ರಿಗಳು ಎಡಮನೆ ನೀಲೇಶ್ವರ ಇವರ ನೇತೃತ್ವದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಕಲಶಪೂಜೆ, ನಾಗತಂಬಿಲ, ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಕಲ್ಲುರ್ಟಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಕೋಟೆ ಚಾಮುಂಡಿ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವ ನಡೆಯಿತು. ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಿತು.

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಆಡಳಿತ ಸಮಿತಿ ಗೌರವ ಸಲಹೆಗಾರ ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಕಾರ್ಯದರ್ಶಿ ಜಯಪ್ರಕಾಶ್ ಹಾರ, ಸದಸ್ಯರಾದ ಶಶಿ ಪುತ್ಯೆಮಜಲು, ಸುರೇಶ ಪಡಿಪಂಡ, ಜಯರಾಮ ನ್ಯೂ ಆರಿಗ, ಜಯಾನಂದ ಬಂಟ್ರಿಯಾಲ್, ದಾಮೋದರ ನ್ಯೂ ಆರಿಗ, ಜಯಂತಿ ಹಾರ, ಕುಸುಮ ಪೊಯ್ಯೊಳೆ, ಗಣೇಶ ಹಾರ, ಮೋನಪ್ಪ ಗೌಡ ಕೆಂಪಮುದೇಲು, ನಾಗೇಶ್ ಹಾರ, ದಾಮೋದರ ಮಡ್ಯಲಗುಂಡಿ, ಗಣೇಶ್ ಕಲಾಯಿ, ಮುತ್ತಪ್ಪ ಡೆಂಜ, ವಾಸುದೇವ ಮಂಡೆಕರ, ಬಾಬು ಪುತ್ಯೆಮಜಲು, ಗೌರವ್ ಹೊಸಮಜಲು, ದೈವದ ಪರಿಚಾರಕರಾದ ನೇಮಣ್ಣ ಗೌಡ, ದಾಮೋದರ ಪೂಜಾರಿ, ಹೊನ್ನಪ್ಪ ಗೌಡ, ಸುಂದರ ಗೌಡ, ಶೀನಪ್ಪ ಗೌಡ, ಆನಂದ ಗೌಡ, ವೆಂಕಟರಮಣ, ಮಾಯಿಲ ವಿಭಾಗದವರು, ಗುರುವ ಹಾರ, ಮುಂಡ ಪೊಯ್ಯಳೆ, ಊರಿನ ಸಮಸ್ತರು, ಸೀಮೆಯ ಭಕ್ತಾದಿಗಳು ಸಹಿತ ಸಾವಿರಾರು ಮಂದಿ ನೇಮೋತ್ಸವದ ವೇಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here