ವಿಟ್ಲ: ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ರಮೇಶ್ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನವೀನ್ ಪಿ.ಎಸ್ ಚುನಾಯಿತರಾಗಿದ್ದಾರೆ.
ನಿರ್ದೇಶಕರಾಗಿ ಡಾ.ನವೀನ್ ಕೊಣಾಜೆ, ಪುಷ್ಪರಾಜ್ ಬಿ., ಉಮಾನಾಥ ರೈ ಎಂ., ನಾಗೇಶ್ ಪಾಟಾಳಿ ಕೆ., ರಾಜೇಂದ್ರ ರೈ ಪಿ., ಲಕ್ಷ್ಮೀಕಾಂತ್ ಬೇಕಲ್, ಸಂದೇಶ್ ಎಂ.ಎಸ್., ಅಖಿಲ್ ಶೆಟ್ಟಿ ಕೆ., ಶಿವಕುಮಾರ ಎಂ.ಜಿ., ಶೀನಪ್ಪ ಎನ್., ಶ್ರೀಧರ ಎನ್., ರಘು, ರವಿ ನಾಯ್ಕ್ ಐ., ಅನಿತಾ ಮಿನೇಜಸ್, ಭಾರತಿ ರವರು ಆಯ್ಕೆಯಾಗಿದ್ದಾರೆ.
ಚುನಾವಣೆಯು ಜ.೨೬ರಂದು ವಿಟ್ಲ ಮಾದರಿ ಹಿ.ಪ್ರಾ. ಶಾಲೆಯಲ್ಲಿ ನಡೆದಿತ್ತು. ಒಟ್ಟು 17 ಸ್ಥಾನಗಳಿಗೆ 44 ನಾಮಪತ್ರ ಸಲ್ಲಿಕೆಯಾಗಿತ್ತು. ಈ ಪೈಕಿ 16 ಮಂದಿ ನಾಮಪತ್ರ ಹಿಂಪಡೆದಿದ್ದರು. ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 14 ಸ್ಥಾನಗಳಿಗೆ 28 ಮಂದಿ ಅಂತಿಮ ಕಣದಲ್ಲಿದ್ದರು. ಪದವಿ ಶಿಕ್ಷಕರ ಕ್ಷೇತ್ರದಿಂದ ಡಾ.ನವೀನ್ ಕೊಣಾಜೆ, ಬೋಧಕೇತರರ ಸ್ಥಾನದಿಂದ ಪುಷ್ಪರಾಜ್ ಬಿ. ಹಾಗೂ ಹಿಂದುಳಿದ ವರ್ಗ ಪ್ರವರ್ಗ ಬಿ ಸ್ಥಾನದಿಂದ ಉಮಾನಾಥ ರೈ ಎಂ. ರವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಠೇವಣಾತಿ ಶಿಕ್ಷಕರ ಕ್ಷೇತ್ರದಿಂದ ಶ್ರೀಧರ ಎನ್., ಶ್ರೀಪತಿ ನಾಯಕ್ ಡಿ, ಪ್ರೌಡಶಾಲಾ ಶಿಕ್ಷಕರ ಕ್ಷೇತ್ರದಿಂದ ಅಖಿಲ್ ಶೆಟ್ಟಿ ಕೆ., ಇಮ್ತಿಯಾಜ್, ಶಿವಕುಮಾರ್ ಎಂ.ಜಿ., ಸತ್ಯಶಂಕರ್ ಎಂ., ನಿವೃತ್ತ ಶಿಕ್ಷಕರ ಸ್ಥಾನದಿಂದ ಕರುಣಾಕರ ಜೆ. ಉಚ್ಚಿಲ, ನಾರಾಯಣ ಪೂಜಾರಿ ಎಸ್.ಕೆ., ಕೆ. ರಮೇಶ್ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದಿಂದ ನಾಗೇಶ್ ಪಾಟಾಳಿ ಕೆ., ರವಿಕುಮಾರ್, ರಾಜೇಂದ್ರ ರೈ ಪಿ., ಲಕ್ಷ್ಮೀಕಾಂತ್ ಬೇಕಲ್ ಎಸ್., ಸಂದೇಶ್ ಎಂ.ಎಸ್., ಅನುಸೂಚಿತ ಪಂಗಡ ಮೀಸಲು ಸ್ಥಾನದಿಂದ ರವಿಪ್ರಸಾದ್ ಕೆ., ರವಿ ನಾಯ್ಕ ಐ., ಮಹಿಳಾ ಮೀಸಲು ಸ್ಥಾನದಿಂದ ಅನಿತಾ ಮಿನೇಜಸ್, ಭಾರತಿ, ಬೆನೆಡಿಕ್ಟಾಗ್ನೆಸ್ ಮೆಂಡೋನ್ಸ, ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನದಿಂದ ಇಸ್ಮಾಲಿ ಕೆ., ನವೀನ್ ಪಿ.ಎಸ್., ಅನುಸೂಚಿತ ಪಂಗಡ ಮೀಸಲು ಸ್ಥಾನದಿಂದ ರವಿಪ್ರಸಾದ್ ಕೆ., ರವಿ ನಾಯ್ಕ್ ಐ., ಅನುಸೂಚಿತ ಜಾತಿ ಮೀಸಲು ಸ್ಥಾನದಿಂದ ಕುಕ್ಕ ಕೆ., ಜಯರಾಮ, ಪುಟ್ಟರಂಗನಾಥ ಟಿ., ರಘು, ಸುರೇಶ್ ಎನ್., ಪದವಿ ಪೂರ್ವ ಕಾಲೇಜು ಶಿಕ್ಷಕರ ಕ್ಷೇತ್ರದಿಂದ ರಮೇಶ್ ಹೆಚ್.ಜೆ., ಶೀನಪ್ಪ ಎನ್.,ರವರು ಅಂತಿಮ ಕಣದಲ್ಲಿದ್ದರು. ಈ ಪೈಕಿ ಕೆ.ರಮೇಶ್ ನಾಯಕ್, ನವೀನ್ ಪಿ.ಎಸ್, ನಾಗೇಶ್ ಪಾಟಾಳಿ ಕೆ., ರಾಜೇಂದ್ರ ರೈ ಪಿ., ಲಕ್ಷ್ಮೀಕಾಂತ್ ಬೇಕಲ್, ಸಂದೇಶ್ ಎಂ.ಎಸ್., ಅಖಿಲ್ ಶೆಟ್ಟಿ ಕೆ., ಶಿವಕುಮಾರ ಎಂ.ಜಿ., ಶೀನಪ್ಪ ಎನ್., ಶ್ರೀಧರ ಎನ್., ರಘು, ರವಿ ನಾಯ್ಕ್ ಐ., ಅನಿತಾ ಮಿನೇಜಸ್, ಭಾರತಿ ರವರು ವಿಜೇತರಾದರು.
ಮಂಗಳೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಭಂದಕರ ಕಚೇರಿಯ ಅಧೀಕ್ಷಕರಾದ ಬಿ.ನಾಗೇಂದ್ರರವರು ರಿಟರ್ನಿಂಗ್ ಅಧಿಕಾರಿಯಾಗಿ ಆಗಮಿಸಿ ಚುನಾವಣೆ ಪ್ರಕ್ರೀಯೆ ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಚಿನ್ ರಾಜ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.