ಪುತ್ತೂರು: ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಫೆ.8 ರಂದು ರಾತ್ರಿ ಶ್ರೀ ಉಳ್ಳಾಲ್ತಿ ದೈವದ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರಗಿದ ಜಾತ್ರೋತ್ಸವದಲ್ಲಿ ರಾತ್ರಿ ಶ್ರೀ ಉಳ್ಳಾಲ್ತಿ ದೈವದ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷರ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಹೈಕೋರ್ಟ್ ನ್ಯಾಯಮೂರ್ತಿ ಸವಣೂರುಗುತ್ತು ವಿಶ್ವಜಿತ್ ಶೆಟ್ಟಿ, ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ, ಅರ್ಚಕ ನಾರಾಯಣ ಬಡೆಕಿಲ್ಲಾಯ, ಜಾತ್ರೋತ್ಸವ ಸಮಿತಿಯ ಕಾರ‍್ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಸುಣ್ಣಾಜೆ, ಪ್ರಧಾನ ಕಾರ‍್ಯದರ್ಶಿ ರಾಘುವ ಗೌಡ ಸವಣೂರು, ಸಂಧ್ಯಾ ವಿ.ಶೆಟ್ಟಿ ಸವಣೂರುಗುತ್ತು, ಕಸ್ತೂರಿಕಲಾ ಎಸ್.ರೈ ಸವಣೂರು, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು ಹಾಗೂ ಸವಣೂರುಗುತ್ತು ಕುಟುಂಬಸ್ಥರು, ಊರ-ಪರವೂರ ಭಕ್ತಾಧಿಗಳು ಭಾಗವಹಿಸಿದರು.
“ಅಚ್ಚುಕಟ್ಟಾದ ವ್ಯವಸ್ಥೆಯ ಜಾತ್ರೋತ್ಸವ”
ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಫೆ.7 ಮತ್ತು 8 ರಂದು ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಡೆದಿದೆ.ಊರ-ಪರವೂರ ಭಕ್ತಾಧಿಗಳು, ಸವಣೂರುಗುತ್ತು ಕುಟುಂಬಸ್ಥರು ಎಲ್ಲರೂ ಭಾಗವಹಿಸಿ ಸಹಕಾರ ನೀಡಿದ್ದಾರೆ, ಎರಡು ದಿನಗಳ ಕಾಲ ಅನ್ನಸಂತರ್ಪಣೆ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಜಾತ್ರೋತ್ಸವದಲ್ಲಿ ಅಂದಾಜು ಮೂರು ಸಾವಿರ ಮಂದಿ ಭಾಗವಹಿಸಿದ್ದಾರೆ.
![](https://puttur.suddinews.com/wp-content/uploads/2025/02/IMG-20250201-WA0153.jpg)
ಅಧ್ಯಕ್ಷರು ಆಡಳಿತ ಸಮಿತಿ,ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ