ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಚೇತನರ ಸಮನ್ವಯ ಸಮಿತಿ ಸಭೆಯು ಫೆ.11 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ಯನ್ನು ಪಂಚಾಯತ್ ಅಧ್ಯಕ್ಷರಾದ ಶರತ್ ಕುಮಾರ್ ಮಾಡಾವುರವರು ವಹಿಸಿದ್ದರು. ಸಭೆಯಲ್ಲಿ ವಿಶೇಷ ಚೇತನರ ಬೇಡಿಕೆಯಾಗಿದ್ದ, ಮನೆಯಲ್ಲಿ ನಡೆಯಲಾಗದ ಸ್ಥಿತಿಯಲ್ಲಿದ್ದ ವಿಕಲ ಚೇತನರಿಗೆ ಅರೋಗ್ಯ ಪರೀಕ್ಷೆ ಮಾಡಿಸಬೇಕು ಎಂದು ಮನವಿ ಮಾಡಿದ ಮೇರೆಗೆ ಪ್ರತಿ ತಿಂಗಳು ಅಶಕ್ತ ಕುಟುಂಬದ ಮನೆಗೆ ಆರೋಗ್ಯ ಇಲಾಖೆಯ ಜೊತೆ ಗೂಡಿ ಪಂಚಾಯತ್ ವತಿಯಿಂದ ಆರೋಗ್ಯ ತಪಾಸನೆ ನಡೆಸುವುದಾಗಿ ನಿರ್ಣಯಿಸಲಾಯಿತು.
ಪಂಚಾಯತ್ ನಿಧಿಯಿಂದ ಶೇ.5 ರಲ್ಲಿ ಅನುದಾನ ನೀಡಲಾಗುವುದು. ವಿಕಲ ಚೇತನರ ತಿಂಗಳ ಮಾಶಾಸನವನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡೆಸಿಕೊಳ್ಳಿ ಎಂದು ತಿಳಿಸಲಾಯಿತು. ಮಾಶಾಸನ ಜಾಸ್ತಿ ಮಾಡಬೇಕೆಂದು ಬಂದ ಬೇಡಿಕೆಗೆ ಸ್ಪಂದಿಸಿ ಕೂಡಲೇ ಸರಕಾರಕ್ಕೆ ಬರೆಯುವುದಾಗಿ ನಿರ್ಣಯಿಸಲಾಯಿತು. ಸಭೆಯಲ್ಲಿ ಪಂಚಾಯತ್ ಸದಸ್ಯರುಗಳಾದ ವಿಜಯ ಕುಮಾರ್ ಸಣಂಗಳ, ಜಯಂತ ಪೂಜಾರಿ ಕೆಂಗುಡೇಲು,ಎಂಆರ್‌ಡಬ್ಲ್ಯೂ ನವೀನ್, ಚರಣ್ ರಾಜ್, ಪುನರ್‌ವಸತಿ ಕಾರ್ಯಕರ್ತ ರಫೀಕ್ ತಿಂಗಳಾಡಿ, ಆಶಾ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದ್ದರು.