ಕಡಬ: ಐತ್ತೂರು ಗ್ರಾಮ ಪಂಚಾಯತ್ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಫೆ.10ರಂದು ಗ್ರಾ.ಪಂ ಅಧ್ಯಕ್ಷೆ ವತ್ಸಲಾ ಜೆ ಅಧ್ಯಕ್ಷತೆಯಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಸಭಾ ಭವನದಲ್ಲಿ ನಡೆಯಿತು.
ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಗಳಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಪುತ್ತೂರು ಇದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಭರತ್ ಬಿ.ಎಂ ಅವರು ಆಗಮಿಸಿದ್ದರು. ಗ್ರಾ.ಪಂ ಸಿಬ್ಬಂದಿ ಶಿಬು ವರದಿ ಮಂಡಿಸಿದರು. ಗ್ರಾಮ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ನಿಲಯದ ಮೇಲ್ವಿಚಾರಕರಾದ ವಿಶ್ವನಾಥ ಬೆನಕಣ್ಣವರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪುತ್ತೂರು ಉಪ ವಿಭಾಗದಿಂದ ಈಶ್ವರ್ ಕೆ.ಎಸ್, ಮೆಸ್ಕಾಂ ಇಲಾಖೆ, ಬಿಳಿನೆಲೆ ಶಾಖೆಯಿಂದ ಶಾಖಾಧಿಕಾರಿ ಮನೋಜ್ ಕುಮಾರ್ ಎನ್, ಕಡಬ ಪಶು ಸಂಗೋಪನಾ ಇಲಾಖೆಯಿಂದ ಕಿರಿಯ ಪಶುವೈದ್ಯಕೀಯ ಪರೀಕ್ಷಕ ರವಿತೇಜ್, ಆರೋಗ್ಯ ಇಲಾಖೆಯಿಂದ ಶಿರಾಡಿ ಉಪ ಸಮುದಾಯ ಅರೋಗ್ಯ ಕೇಂದ್ರದ ಡಾ.ಚಂದ್ರಶೇಖರ್ ಟಿ.ಎಂ, ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ ಇಲಾಖೆಯಿಂದ ಅಶ್ವಿನ್ ಕುಮಾರ್, ಶಿಕ್ಷಣ ಇಲಾಖೆಯಿಂದ ಬಂಟ್ರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕುಮಾರ್ ಕೆ.ಜೆ, ಪೋಲಿಸ್ ಇಲಾಖೆಯಿಂದ ಕಡಬ ಠಾಣಾ ಹೆಡ್ ಕಾನ್ಸ್‌ಟೇಬಲ್ ಹರೀಶ್ ಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೇಲ್ವಿಚಾರಕಿ ವನಿತಾ ಶಿವರಾಮ್ ತಮ್ಮ ತಮ್ಮ ಇಲಾಖೆ ಪರವಾಗಿ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ವೇದಿಕೆಯಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತಾ.ಕೆ, ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ನಾಗೇಶ್ ಗೌಡ, ಮನಮೋಹನ್ ಗೋಳ್ಯಾಡಿ, ಶ್ಯಾಮಲಾ, ಈರೇಶ್ ಗೌಡ ಉಪಸ್ಥಿತರಿದ್ದರು.
ಶಾಲಾ ವಿಧ್ಯಾರ್ಥಿಗಳಿಗೆ ಗ್ರಂಥಾಲಯ ವತಿಯಿಂದ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಗ್ರಂಥಾಲಯ ಮೇಲ್ವಿಚಾರಕಿ ವೇಜಾ ಅವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತಾ.ಕೆ ಸ್ವಾಗತಿಸಿ ವಂದಿಸಿದರು.