ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ, ಪ್ರ.ಕಾರ್ಯದರ್ಶಿಯಾಗಿ ರಿಯಾಝ್, ಕೋಶಾಧಿಕಾರಿ ಹಮೀದ್ ಕರ್ಗಲ್
ಪುತ್ತೂರು: ಹಿಮಾಯತುಲ್ ಇಸ್ಲಾಂ ಮಸ್ಜಿದ್ ಮತ್ತು ಮದ್ರಸ ಪುರುಷರಕಟ್ಟೆ ಇದರ ವಾರ್ಷಿಕ ಮಹಾಸಭೆ ಹಾಗೂ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇಬ್ರಾಹಿಂ ಗನ್ನಿ ಅಧ್ಯಕ್ಷತೆಯಲ್ಲಿ ಫೆ.9ರಂದು ಪುರುಷರಕಟ್ಟೆ ಮದ್ರಸ ಹಾಲ್ನಲ್ಲಿ ನಡೆಯಿತು. ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ ಮಾಯಂಗಳ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ಮಸೀದಿಯ ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಮಾಯಂಗಳ, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಶಾಂತಿಗೋಡು, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಕರ್ಗಲ್ ಆಯ್ಕೆಯಾದರ. ಉಪಾಧ್ಯಕ್ಷರಾಗಿ ರಫೀಕ್ ಪಿ ಕೆ ಮತ್ತು ಶೇಕ್ ಇಮಾಮ್ ಸಾಹೇಬ್, ಜೊತೆ ಕಾರ್ಯದರ್ಶಿಯಾಗಿ ಸಿಯಾಬ್ ಎಂ ಎ, ಗೌರವ ಸಲಹೆಗರರಾಗಿ ಇಬ್ರಾಹಿಂ ಗನ್ನಿ ಹಾಗೂ 14 ಕಾರ್ಯಕಾರಿಣಿ ಸದಸ್ಯರನ್ನೊಳಗೊಂಡ ಕಮಿಟಿಯನ್ನು ರಚಿಸಲಾಯಿತು.