ಹಿರೇಬಂಡಾಡಿ : ಅಡಿಕೆ ತೋಟದಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ 250 ಕ್ಕೂ ಹೆಚ್ಚು ಆಡಿಕೆ ಗಿಡಗಳು ಸುಟ್ಟು ಹೋಗಿರುವ ಘಟನೆ ಹಿರೇಬಂಡಾಡಿ ಗ್ರಾಮದ ಪಡ್ಯೊಟ್ಟು ಎಂಬಲ್ಲಿ ಫೆ.13 ರಂದು ನಡೆದಿದೆ.
ಪಡ್ಯೊಟ್ಟು ನಿವಾಸಿ ಯತೀಶ್ ಶೆಟ್ಟಿ ಎಂಬವರಿಗೆ ಸೇರಿದ ಸುಮಾರು 1 ಎಕ್ರೆ ಪ್ರದೇಶದಲ್ಲಿನ ಅಡಿಕೆ ತೋಟದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸುಮಾರು 250 ಕ್ಕೂ ಹೆಚ್ಚು ಆಡಿಕೆ ಗಿಡಗಳು ಸುಟ್ಟು ಹೋಗಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಘಟನೆ ವೇಳೆ ಪುತ್ತೂರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದು ಅವರು ಬೇರೆ ಕಡೆ ಬೆಂಕಿ ನಂದಿಸಲು ತೆರಳಿದ್ದರಿಂದ ಕೊನೆಗೆ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.