ಕೆಯ್ಯೂರು: ಕೆಯ್ಯೂರು ಗ್ರಾಮದ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಜಯಂತ ಪೂಜಾರಿ ಕೆಂಗುಡೇಲು, ಕಾರ್ಯದರ್ಶಿಯಾಗಿ ಹನೀಫ್ ಕೆ.ಎಂ ಆಯ್ಕೆಯಾಗಿದ್ದಾರೆ
ಫೆ.11ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಜಯಂತ ಪೂಜಾರಿ ಕೆಂಗುಡೇಲು ಹೆಸರನ್ನು ಘೋಷಿಸಿದರು. ಅವರ ಶಿಫಾರಸಿನ ಮೇರೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಪಕ್ಷದ ವಲಯ ಪ್ರಮುಖರೊಂದಿಗೆ ಚರ್ಚಿಸಿ ಆಯ್ಕೆ ಮಾಡಲಾಗಿದೆ.
ಸಭೆಯನ್ನು ಕುರಿತು ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಕಾಂಗ್ರೆಸ್ ಪಕ್ಷವನ್ನು ವಲಯ ಮಟ್ಟದಲ್ಲಿ ಬಲಿಷ್ಠಗೊಳಿಸುವ ಮಟ್ಟಿನಲ್ಲಿ ಪ್ರತಿ ವಲಯ ಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗುತ್ತದೆ. ಸರಕಾರದಿಂದ ಸಿಗುವ ಯೋಜನೆಗಳು ತಳಮಟ್ಟಕ್ಕೆ ತಲುಪಿದೆಯೇ ಎಂಬುದನ್ನು ಪ್ರತಿಯೊಬ್ಬ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಈ ಮೂಲಕ ನೊಂದವರಿಗೆ ಸಹಾಯ ಮಾಡುವ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಗಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಯ್ಯೂರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಇಳಾಂತಜೆ , ಎ.ಕೆ ಜಯರಾಮ ರೈ ಕೆಯ್ಯೂರು, ಹಾಲಿ ಉಪಾಧ್ಯಕ್ಷರಾದ, ಶೀನಪ್ಪ ರೈ ದೇವಿನಗರ, ವಿಶ್ವನಾಥ್ ಪೂಜಾರಿ ಕೆಂಗುಡೇಲು ಕೋಶಾಧಿಕಾರಿ ಅಬ್ದುಲ್ ಖಾದರ್ ಮೇರ್ಲ ಸದಸ್ಯರಾದ ಚಂದ್ರಶೇಖರ ಕೆಎಸ್, ರೂಪಾ ಎಸ್ ರೈ , ಧರಣಿ ಸಿ.ಬಿ, ಪದ್ಮನಾಭ, ಉಮಾಕಾಂತ್ ಬೈಲಾಡಿ, ರವಿಪ್ರಸಾದ್ ಶೆಟ್ಟಿ, ಶಾರೂನ ಸೀಕ್ವೇರ, ಸುಪ್ರೀತ್ ಕಣ್ಣಾರಾಯ, ಡಿ.ಬಟ್ಯಪ್ಪರೈ ದೇರ್ಲ, ಗಂಗಾಧರ ಶೆಟ್ಟಿ ಎಲಿಕಾ, ಸುಜಯ ಕೆಯ್ಯೂರು , ಅಶೋಕ್ ರೈ ದೇರ್ಲ, ಶೇಷಪ್ಪ ದೇರ್ಲ , ಲೀಲಾ ಬಿ ಆರ್, ಗೌರಿ, ಭಾಗಿರಥಿ, ಪುಷ್ಪಲತಾ, ಮೈಮುನ, ಪಿ.ವೈ. ಮಹಮೂದ್ ಪಟ್ಟೆಕಾರ್ಸ್, ದಾಮೋದರ ಪೂಜಾರಿ ಕೆಂಗುಡೇಲು, ಉದಯ ಕೆ ಪಿ, ಆಯುಬು, ಪ್ರೇಮಾ ಸಂತೋಷನಗರ, ಉಪಸ್ಥಿತರಿದ್ದರು.