ಇಂದು ಬೆಟ್ಟಂಪಾಡಿ ವಿನಾಯಕನಗರ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಶ್ರೀಸತ್ಯನಾರಾಯಣ ಪೂಜೆ, ನಗರ ಭಜನಾ ಮಂಗಲೋತ್ಸವ

0

ಪುತ್ತೂರು: ಬೆಟ್ಟಂಪಾಡಿ ವಿನಾಯಕನಗರದಲ್ಲಿರುವ ಶ್ರೀಸಿದ್ಧಿವಿನಾಯಕ ಸೇವಾ ಸಂಘದ 24ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ನಗರ ಭಜನಾ ಮಂಗಲೋತ್ಸವ ಕಾರ್ಯಕ್ರಮ ಫೆ.15ರಂದು ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ.


ಬೆಳಿಗ್ಗೆ 7ರಿಂದ ಗಣಪತಿ ಹೋಮ, 10.30ರಿಂದ ಬಲ್ನಾಡು ದುರ್ಗಾಶ್ರೀ ಭಜನಾ ಮಂಡಳಿಯ ಪರಮೇಶ್ವರಿ ಬಿ.ಆರ್. ದೀಪ ಪ್ರಜ್ವಲನೆ ಮಾಡಿ ಕಾಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ೪.೩೦ರಿಂದ ಭಜನಾ ಮಂಗಲೋತ್ಸವ, ೫ರಿಂದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಶ್ರೀಸಿದ್ಧಿವಿನಾಯಕ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ರಾತ್ರಿ ೭ರಿಂದ ಮಹಾಮಂಗಳಾರತಿ, ಸಭಾ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಭಾಕಾರ್ಯಕ್ರಮ:

ರಾತ್ರಿ 8.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರಭಟ್ ಪಂಜಿಗುಡ್ಡೆ, ಮುಖ್ಯ ಅತಿಥಿಗಳಾಗಿ ಮಹೇಶ್ ಕೋರ್ಮಂಡ, ನೋಟರಿ ವಕೀಲ ಚಿದಾನಂದ ಬೈಲಾಡಿ, ವಿಶ್ವನಾಥ ಪೂಜಾರಿ ನರ್ಕಳ, ಪ್ರಗತಿಪರ ಕೃಷಿಕ ವಿಶ್ವನಾಥ ರೈ ಕಡಮಾಜೆ, ಕೋನಡ್ಕ ಲಕ್ಷ್ಮೀ ಮಸಾಜ್ ಸೆಂಟರ್‌ನ ನಾಟಿ ವೈದ್ಯ ಗಂಗಾಧರ ಕೆ.ಎನ್. ಭಾಗವಹಿಸಲಿದ್ದಾರೆ. ಆಜ್ಯ ಜೇನು ಕೃಷಿ ತರಬೇತುದಾರ ರಾಧಾಕೃಷ್ಣ ಆರ್.ಕೋಡಿ ಮತ್ತು ಗಾಯಕಿ ಸಿಂಚನಾ ಎಂ.ಗೌಡರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here