ಶಿರಾಡಿ ಗ್ರಾ.ಪಂ.: ವಿಶೇಷ ಚೇತನರ ಸಮನ್ವಯ ಗ್ರಾಮಸಭೆ

0


ನೆಲ್ಯಾಡಿ: ಶಿರಾಡಿ ಗ್ರಾ.ಪಂ.ನ 2024-25ನೇ ಸಾಲಿನ ವಿಶೇಷ ಚೇತನರ, ಮಕ್ಕಳ ಮತ್ತು ಮಹಿಳಾ ವಿಶೇಷ ಸಮನ್ವಯ ಗ್ರಾಮ ಸಭೆ ಫೆ.11ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳಿನೆಲೆ ಗ್ರಾ.ಪಂ. ವಿಆರ್‌ಡಬ್ಲ್ಯು ಕಾರ್ಯಕರ್ತ ವಿಜಯಕುಮಾರ್ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತ್ ಅವರು ಮಾತನಾಡಿ, ಸರ್ಕಾರದ ಆದೇಶದಂತೆ ವಿಕಲಚೇತನರಿಗೆ ಶೇ.5ರ ನಿಧಿಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮರ್ದಾಳ ಬೆಥನಿ ಜೀವನ ಜ್ಯೋತಿ ವಿಶೇಷ ಚೇತನರ ಶಾಲೆಯ ಶಿಕ್ಷಕಿ ಜೆಷ್ಟೀನಾ ರೋಷನ್‌ರವರು ವಿಶೇಷ ಚೇತನರನ್ನು ಪ್ರೀತಿ, ವಾತ್ಸಲ್ಯದಿಂದ ಹೇಗೆ ಮತ್ತು ಯಾಕೆ ಪಾಲನೆ ಮಾಡಬೇಕು ಎಂಬ ಬಗ್ಗೆ ವಿವರಿಸಿದರು. ಸಿಆರ್‌ಪಿ ಪ್ರಕಾಶ್ ಅವರು ಮಕ್ಕಳ ಹಕ್ಕುಗಳು, ಶೈಕ್ಷಣಿಕ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಮುಖ್ಯ ಪಾತ್ರ ವಹಿಸುವ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ವಲಯ ಮೇಲ್ವಿಚಾರಕಿ ಪುಷ್ಪಾವತಿರವರು ಮಾತನಾಡಿ, ಮಹಿಳೆಯರ ಹಕ್ಕುಗಳು, ಸಮಾನತೆ, ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲೂ ಮುಖ್ಯವಾಹಿನಿಗೆ ತರುವ ವಿಷಯಗಳ ಕುರಿತು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾತಂಗಚ್ಚನ್‌ರವರು ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ತರಲು ಸಮಾಜದ ಜವಾಬ್ದಾರಿಯ ಬಗ್ಗೆ ತಿಳಿಸಿದರು.

ಸನ್ಮಾನ/ಬಹುಮಾನ ವಿತರಣೆ:
ಬೆಥನಿ ಜೀವನ್ ಜ್ಯೋತಿ ವಿಶೇಷ ಚೇತನರ ಶಾಲೆಯ ಶಿಕ್ಷಕಿ ಜೆಸ್ಟೀನಾ ರೋಷನ್‌ರವರಿಗೆ ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಶೇಷ ಚೇತನರ ದಿನಾಚರಣೆಯ ಅಂಗವಾಗಿ ಗ್ರಾಮದ ವಿಶೇಷ ಚೇತನರಿಗೆ ನಡೆಸಿದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಕಾರ್ಯದರ್ಶಿ ಶಾರದಾ ಸ್ವಾಗತಿಸಿದರು. ಗ್ರಾ.ಪಂ.ಸಿಬ್ಬಂದಿ ರಮ್ಯಾ ವಂದಿಸಿದರು. ಐತ್ತೂರು ಗ್ರಾ.ಪಂ. ವಿಆರ್‌ಡಬ್ಲ್ಯು ಸಂತೋಷ್ ಕುಮಾರ್, ಗ್ರಾ.ಪಂ.ಸದಸ್ಯರು, ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕರು, ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿಶೇಷಚೇತನರು/ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ರೆ.ಫಾ.ನೋಮೀಸ್ ಕುರಿಯಾಕೋಸ್, ಭಾರತ್ ಸುಪಾರಿ ಉದನೆ, ವಿವೇಕ್ ಉದನೆ, ಪಿಂಕಿ ಸಾಜು ಉರುಂಬಿಲ್, ಅಬ್ರಹಾಂ ಪಿ.ವಿ., ಶಾಜಿ ಕೂರಾಪುಳ್ಳಿಲಿಲ್, ಜಿನಿ ಲೆನಿನ್, ಜಿಜಿ ಶಾಜಿ, ಶೃದ್ಧಾ, ಬೇಸಿಲ್ ಜೋಬಿ, ಸಂತೋಷ್ ಕುಮಾರ್ ಐತ್ತೂರು ಬಹುಮಾನ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here