ಪುತ್ತೂರು: ಸವಣೂರು ಗ್ರಾಮದ ಸೊಂಪಾಡಿ ಶ್ರೀ ಮಾರಿಯಮ್ಮ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆಯು ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.


ಸಮಿತಿಯ ಗೌರವಾಧ್ಯಕ್ಷರಾದ ಸುದರ್ಶನ್ ನಾಕ್ ಕಂಪ, ಗಿರಿಶಂಕರ್ ಸುಲಾಯ ದೇವಸ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ.ಸವಣೂರು, ಜೊತೆ ಕಾರ್ಯದರ್ಶಿ ತಾರಾನಾಥ ಕಾಯರ್ಗ, ಕ್ಷೇತ್ರದ ಅನುವಂಶೀಯ ಮೊಕ್ತೇಸರ ಬಾಬು ಸೊಂಪಾಡಿ, ಶ್ರೀ ಮಾರಿಯಮ್ಮ ಸೇವಾ ಟ್ರಸ್ಟ್ ಅಧ್ಯಕ್ಷ ವಿಜಯ ಸೊಂಪಾಡಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಚೇತನ್ ಕುಮಾರ್ ಕೋಡಿಬೈಲು, ಸತೀಶ್ ಬಲ್ಯಾಯ ಕನಡಕುಮೇರು, ಜಯಶ್ರೀ ಕುಚ್ಚೆಜಾಲು, ಗಂಗಾಧರ ಪೆರಿಯಡ್ಕ, ಆಶಾ ರೈ ಕಲಾಯಿ ಹಾಗೂ ಕ್ಷೇತ್ರಕ್ಕೆ ಒಳಪಟ್ಟ ಮನೆಯವರು ಉಪಸ್ಥಿತರಿದ್ದರು.