ಮಕ್ಕಳ ಸಾಧನೆಯಿಂದ ಹೆತ್ತವರಲ್ಲಿ ಸಾರ್ಥಕ ಭಾವ : ಗಣೇಶ ಪ್ರಸಾದ್ ಎ.
ಪುತ್ತೂರು: ದೇಶದ ಅತ್ಯಂತ ಕ್ಷಿಷ್ಟಕರ ಪರೀಕ್ಷೆಗಳಲ್ಲಿ ಜೆಇಇಯೂ ಒಂದು. ಅಂತಹ ಪರೀಕ್ಷೆಯಲ್ಲಿ ಸಾಧನೆಗೈಯುವುದು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಹೆತ್ತವರು ತಮ್ಮ ಮಕ್ಕಳ ಸಾಧನೆಗಾಗಿ ಸಾಕಷ್ಟು ಪ್ರಯತ್ನಪಡುತ್ತಾರೆ. ಅಂತಹ ಸಂದರ್ಭದಲ್ಲಿ ಮಕ್ಕಳು ಅತ್ಯುತ್ತಮ ಫಲಿತಾಂಶ ದಾಖಲಿಸಿದಾಗ ಅವರಿಗೂ ಸಾರ್ಥಕ ಭಾವ ಮೂಡುವುದಕ್ಕೆ ಸಾಧ್ಯ. ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಸಾಧನೆಗೈದದ್ದಕ್ಕಿಂತಲೂ ಹೆಚ್ಚಿನ ಸಾಧನೆಯನ್ನು ಜೆಇಇ ಅಡ್ವಾನ್ಸ್‌ಪರೀಕ್ಷೆಯಲ್ಲಿ ಸಾಧಿಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ. ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಜೆಇಇ ಸಾಧಕರ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಕೆ ಕಿಶೋರ್ ಭಟ್ ಮಾತನಾಡಿ ಮುಂದಿನ ಜೆಇಇ ಅಡ್ವಾನ್ಸ್ ಹಾಗೂ ದ್ವಿತೀಯ ಪಿಯುಸಿ ಇಲಾಖಾ ಪರೀಕ್ಷೆಯಲ್ಲಿ ಸಂಪೂರ್ಣ ಯಶಸ್ಸನ್ನು ಪಡೆಯುವಂತಾಗಬೇಕು ಎಂದು ಹಾರೈಸಿದರು.

ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಉಪ ಪ್ರಾಂಶುಪಾಲೆ ಶೈನಿ ಕೆ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಇಇ ಪರೀಕ್ಷೆಯ ಫಲಿತಾಂಶದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಭುವನ್ ರೈ, ೯೦% ಪರ್ಸೆಂಟೇಲ್‌ಗಿಂತ ಅಧಿಕ ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳು, ಅವರ ಹೆತ್ತವರು, ಉಪನ್ಯಾಸಕರು ಹಾಜರಿದ್ದರು.