ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನರಿಮೊಗರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ಮಹತ್ತರವಾದ ಶೈಕ್ಷಣಿಕ ಕಾರ್ಯಕ್ರಮವಾದ FLN ಮಕ್ಕಳ ಕಲಿಕಾ ಹಬ್ಬ ರಾಜ್ಯಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ನಡೆಯುತ್ತಿದ್ದು, ಪುತ್ತೂರು ತಾಲೂಕಿನ ನರಿಮೊಗರು ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಫೆ. 18 ರಂದು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಇವರು ಉದ್ಘಾಟಿಸಿ ಶುಭ ಹಾರೈಸಿದರು. ವೀರಮಂಗಲ ಪಿಎಂಶ್ರೀ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಸಭಾ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ ಮತ್ತು ಕಾರ್ಯದರ್ಶಿ ಗೋಪಾಲಕೃಷ್ಣ ಶುಭಾಶಂಸನೆಗೈದರು. ಎಸ್ ಡಿ ಎಂ ಸಿ ಉಪಾಧ್ಯಕ್ಷ ನವ್ಯ ,ಸದಸ್ಯರಾದ ಸುರೇಶ್ ಗಂಡಿ,ರಮೇಶ ಗೌಡ,ಹರೀಶ ಮಣ್ಣಗುಂಡಿ,ಸಂದೀಪ್ ಕಾಂತಿಲ, ಯೋಗೀಶ, ವಿನುತ,ಚಂದ್ರಾವತಿ,ಭವ್ಯಾ,ಅರ್ಚನಾ, ನಳಿನಿ, ರಝಾಕ್,ಸಮೀರ್,ಉಮ್ಮರ್, ಅನುಪಮ, ರಾಜೇಶ್ವರಿ,ರತ್ನಾವತಿ, ಹಿರಿಯ ವಿದ್ಯಾರ್ಥಿ ಸಂಘದ ಫಾರೂಕ್, ಸಲೀಂ, ಗಣೇಶ ಸಾರಕೂಟೆಲು, ಸುರೇಶ್ ಮಾಸ್ಟರ್, ಶಿಕ್ಷಕರಾದ ಶ್ರೀಲತಾ,ಕವಿತಾ,ಹೇಮಾವತಿ,ಸೌಮ್ಯ,ಶಿಲ್ಪರಾಣಿ, ಸವಿತಾ,ಸಂಚನಾ,ಸುಮಿತ್ರಾ ಉಪಸ್ಥಿತರಿದ್ದರು. ನರಿಮೊಗರು ಕ್ಲಸ್ಟರ್ ಸಿಆರ್ ಪಿ ಪರಮೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿ,ಹರಿಣಾಕ್ಷಿ ವಂದಿಸಿದರು .ಶೋಬಾ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಚಟುವಟಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಸಮನ್ವಯಾಧಿಕಾರಿ ನವೀನ್ ಸ್ಟೀಪನ್ ವೇಗಸ್, ಶಿಕ್ಷಣ ಸಂಯೋಜಕಿ ಅಮೃತಕಲಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರತ್ನಾವತಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ನರಿಮೊಗರು ಕ್ಲಸ್ಟರ್ ನ 11 ಶಾಲೆಯ 100 ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ತೊಡಗಿಕೊಂಡರು.


ಏನಿದು FLN ಕಲಿಕಾ ಹಬ್ಬ?
ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ
ಪ್ರತಿ ವಿದ್ಯಾರ್ಥಿಯು ಶಾಲೆಗೆ ದಾಖಲಾಗಬೇಕು,ದಾಖಲಾದ ಮಕ್ಕಳು ಪ್ರತಿದಿನ ಶಾಲೆಗೆ ಹಾಜರಾಗಬೇಕು, ಹಾಜರಾದ ಮಕ್ಕಳು ನಿಗಧಿಪಡಿಸಿದ ಕಲಿಕೆಯನ್ನು ಒತ್ತಡವಿಲ್ಲದೆ ಸಾಧಿಸಬೇಕೆನ್ನುವುದು ಶಾಲಾ ಶಿಕ್ಷಣ ಇಲಾಖೆಯ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಮೂಲಭೂತವಾಗಿ ಓದು ಬರಹ ಮತ್ತು ಸಂಖ್ಯಾ ಜ್ಞಾನದಲ್ಲಿ ಪ್ರಗತಿ ಸಾಧಿಸದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮತ್ತು ಸಂತಸದಾಯಕ ಹಾಗೂ ಅನುಭಾವತ್ಮಕ ಕಲಿಕೆಯ ವಾತಾವರಣವನ್ನು ಪ್ರೇರೇಪಿಸಲು ಹಮ್ಮಿಕೊಂಡ ಕಾರ್ಯಕ್ರಮವೇ FLN ಕಲಿಕಾ ಹಬ್ಬ 2025.


ಕಲಿಕಾ ಹಬ್ಬದಲ್ಲಿ ಚಟುವಟಿಕೆಗಳು ವೈವಿದ್ಯಮಯವಾಗಿ ಸಾಗಲು ಇಲ್ಲಿ 7 ಕಾರ್ನರ್ ಗಳನ್ನು ಸೃಜಿಸಲಾಗಿತ್ತು. ಈ ಕಲಿಕಾ ಮೂಲೆಗಳಿಂದ ವಿಭಿನ್ನ ಕಲಿಕೆಯ ವೇಗ ಮತ್ತು ಶೈಲಿಯನ್ನು ಹೊಂದಿರುವ ಮಕ್ಕಳು ತೊಡಗಿಕೊಂಡರು. ವೈವಿದ್ಯಮಯ ವಿಧಾನ ಮತ್ತು ತಂತ್ರಗಳನ್ನು ಅಳವಡಿಸಿ ಕಲಿಕೆ ಸಾಗಿತು. ಕಲಿಕಾ ಆಟಗಳು ಮತ್ತು ಚಟುವಟಿಕೆಗಳು ಮಕ್ಕಳಿಗೆ ಕಲಿಕೆಗೆ ಉತ್ತೇಜನ ನೀಡಿತು. ಅನುಭಾವತ್ಮಕ ಕಲಿಕೆ ಪೂರಕವಾಗಿ ತರಕಾರಿ ಹಣ್ಣುಗಳನ್ನು,ಹಳೆಯ ವಸ್ತುಗಳನ್ನು ಗಣಿತದ ಪಾರ್ಕನ್ನು ಆಯೋಜನೆ ಮಾಡಲಾಗಿತ್ತು. ಗಟ್ಟಿ ಓದು,ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಾಫಿ, ಸಂತೋಷದಾಯಕ ಗಣಿತ, ಟ್ರೆಷರ್ ಹಂಟ್/ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ, ಈ ವಲಯಗಳಲ್ಲಿ ವಿಂಗಡಿಸಿ ಸಂಪನ್ಮೂಲ ವ್ಯಕ್ತಿಗಳು ಚಟುವಟಿಕೆಗಳನ್ನು ಆಯೋಜಿಸಿದರು..


ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾಗಿ ಚರಣ್ ಕುಮಾರ್ ಮುಕ್ವೆ, ಅನಂತ ಭಕ್ತಕೋಡಿ, ದೇವಪ್ಪ ಇಡ್ಯೊಟ್ಟು,ಬಶೀರ್ ಮುಂಡೂರು, ಸತೀಶ್ ಸರ್ವೆ, ಮಾಲತಿ ಆನಡ್ಕ,ಶೋಬಾ ವೀರಮಂಗಲ ಇವರು ಭಾಗವಹಿಸಿದರು. ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ಕಲಿಕಾ ಹಬ್ಬದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here