ಫೆ.26: ಮಹಾಶಿವರಾತ್ರಿ – ಕೊಡಿಪ್ಪಾಡಿಯಲ್ಲಿ ಈಶ ಫೌಂಡೇಶನ್ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ

0

ಪುತ್ತೂರು:ಮಹಾಶಿವರಾತ್ರಿಯ ಅಂಗವಾಗಿ ಫೆ.26ರಂದು ಕೊಯಮುತ್ತೂರಿನ ಈಶ ಫೌಂಡೇಶನ್‌ನ ವತಿಯಿಂದ ಈಶಾ ಯೋಗ ಕೇಂದ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ನಡೆಯುವ ಮಹಾಶಿವರಾತ್ರಿ ಆಚರಣೆಯ ನೇರ ಪ್ರಸಾರವನ್ನು ಕೊಡಿಪ್ಪಾಡಿಯ ಕೊಡಿಕಾಡ್‌ನಲ್ಲಿ ಬೃಹತ್ ಪರದೆಯಲ್ಲಿ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.


ಶಿವರಾತ್ರಿ ಒಂದು ಪ್ರಾಕೃತಿಕ ವಿಸ್ಮಯ. ವಿಜ್ಞಾನ ಹೇಳುವಂತೆ ಈ ಜಗತ್ತು ಒಂದೇ ಶಕ್ತಿಯ ಹಲವು ರೂಪಗಳು. ಇದರ ಅನುಭವ ಪಡೆಯಲು ಪ್ರಕೃತಿ ನಮಗೆ ಸಹಾಯ ನೀಡುವ ಅತ್ಯದ್ಭುತ ದಿನವೇ ಶಿವರಾತ್ರಿ. ಪ್ರತಿ ತಿಂಗಳು ಶಿವರಾತ್ರಿ ಬರುತ್ತೆ. ಆದರೆ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಶಿವರಾತ್ರಿ ಅತೀ ವಿಶೇಷ. ಶಿವರಾತ್ರಿಯ ದಿನ ರಾತ್ರಿಯಂದು ಸರಿಯಾದ ಸಮಯಕ್ಕೆ, ಸರಿಯಾದ ಜಾಗದಲ್ಲಿ ದೇಹ ಹಾಗು ಮನಸ್ಸನ್ನು ಇರಿಸಿದಲ್ಲಿ, ನಮ್ಮ ಆಂತರಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಪ್ರಾಕೃತಿಕವಾಗಿ ಸಹಕಾರ ಲಭಿಸಲಿದೆ ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್.


ಮಹಾಶಿವರಾತ್ರಿಯ ದಿನ ಸದ್ಗುರುಗಳು ನಡೆಸಿಕೊಂಡು ಬರುವ ತೀವ್ರ ಸ್ಥಿತಿಯ ಧ್ಯಾನಗಳು ಮತ್ತು ಖ್ಯಾತ ಕಲಾವಿದರ ಅದ್ಬುತ ಸಂಗೀತ ಮತ್ತು ನೃತ್ಯದೊಂದಿಗೆ ರಾತ್ರಿ ಇಡಿ ನಡೆಯುವ ಕಾರ್ಯಕ್ರಮವನ್ನು ಸ್ವತಃ ಧ್ಯಾನ ಹಾಗೂ ಪಠಣದೊಂದಿಗೆ ಆಚರಿಸುತ್ತಾ ಕೊಡಿಪ್ಪಾಡಿಯ ಕೊಡಿಕಾಡ್‌ನಲ್ಲಿ ಅಳವಡಿಲಾಗಿರುವ ಬೃಹತ್ ಪರದೆಯ ಮೂಲಕ ವೀಕ್ಷಣೆ ಮಾಡಬಹುದು. ಜೊತೆಗೆ ಭೌತಿಕ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಬುಕ್ಕಿಂಗ್ ಮಾಡಲು ದೂರವಾಣಿ 9663897735 ನಂಬರನ್ನು ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here