40ಕ್ಕಿಂತಲೂ ಹೆಚ್ಚು ಸ್ಟಾಲ್- 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಂದ ವ್ಯವಹಾರ
ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶೈಕ್ಷಣಿಕ ಚಟುವಟಿಕೆಯ ಹೊಸ ಅಧ್ಯಾಯ ಮೆಟ್ರಿಕ್ ಮೇಳ ಪ್ರಗತಿ ಜಾತ್ರೆ ಫೆ 19ರಂದು ನಡೆಯಿತು. ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ರಿಬ್ಬನ್ ಕಟ್ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಸ್ಟಾಲ್ ನ್ನು ಉದ್ಘಾಟಿಸಿದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದ, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎಂ.ಬಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕೆ .ಎಸ್.ಟಿ.ಎ .ಪುತ್ತೂರು ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಅನಿಲ, ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ, ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಸದಸ್ಯರಾದ ಉದಯ ರೈ ಮಾದೋಡಿ, ನಾಗೇಶ್ ರೈ ಮಾಳ, ಸಂಸ್ಥೆಯ ಟ್ರಸ್ಟಿಗಳಾದ ವೃಂದಾ ಜೆ. ರೈ ಮಾದೋಡಿ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಮುಖ್ಯಗುರುಗಳಾದ ನಾರಾಯಣ್ ಭಟ್, ವಿನಯ ವಿ. ಶೆಟ್ಟಿ, ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ. ರೈ ಹಾಗೂ ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತಿಸಿದರು. ಶಿಕ್ಷಕಿಯರಾದ ಸವಿತಾ ಕೆ, ಧನ್ಯ ಎಂ. ಕೆ, ಕವಿತಾ ವಿ. ರೈ, ಭವಾನಿ, ಶೃತಿ, ಸುಷ್ಮಾ ರೈ ಮತ್ತು ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮವನ್ನು ಆಯೋಜಿಸಿದರು.

ಪ್ರಗತಿ ಜಾತ್ರೆಯಲ್ಲಿ ಏನಿತ್ತು ವಿಶೇಷತೆ..
ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮೆಟ್ರಿಕ್ ಮೇಳದ ಪ್ರಯುಕ್ತ ನಡೆದ ಪ್ರಗತಿ ಜಾತ್ರೆಯಲ್ಲಿ ಬೆಳಿಗ್ಗೆ ಕೊಂಬು ವಾದ್ಯ, ತರಕಾರಿ ವೇಷ ಭೂಷಣಧಾರಿಗಳ ಸ್ವಾಗತದೊಂದಿಗೆ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಸುಮಾರು 40ಕ್ಕಿಂತಲೂ ಹೆಚ್ಚು ತಂಡವಾರು ಸ್ಟಾಲ್ ಗಳನ್ನು ಹೊಂದಿದ್ದು, 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯವಹಾರ ನಡೆಸಿದರು. ವಿಶೇಷವಾಗಿ ಭೂತದ ಮನೆ, ತೊಟ್ಟಿಲು ಉಯ್ಯಲೆ, ಕುದುರೆ, ಜೋಕರ್ಸ್, ಲಕ್ಕಿ ಗೇಮ್ ಗಳು, ವಿಭಿನ್ನ ಶೈಲಿಯ ಆಟಗಳು ಮನರಂಜಿಸಿದವು. ಫ್ಯಾನ್ಸಿ ಐಟಂ, ತಾಜಾ ಹಣ್ಣಿನ ಜ್ಯೂಸ್, ಸ್ವೀಟ್ ಕಾರ್ನ್, ವಿವಿಧ ರೀತಿಯ ತರಕಾರಿಗಳು, ನರ್ಸರಿ, ಮನೆಯಲ್ಲಿ ತಯಾರಿಸಿದ ತಿಂಡಿ, ಐಸ್ ಕ್ರೀಮ್, ಮಜ್ಜಿಗೆ ನೀರು, ಔಷಧಿಯ ಗಿಡಗಳು, ಮಸಾಲಾ ಪುರಿ, ಚರುಂಬುರಿ, ಹಲಸಿನ ಹಣ್ಣು, ಮಾವಿನ ಕಾಯಿ, ಹಿಡಿಸೂಡಿ, ಸ್ವೀಟ್ ಬೀಡ, ಚಪಾತಿ ಗಸಿ, ಔಷಧಿ ಎಣ್ಣೆಗಳು, ಹಾಳೆಯ ಟೋಪಿ, ಹೂವಿನ ಗಿಡ, ವಿವಿಧ ರೀತಿಯ ಉಪ್ಪಿನಕಾಯಿ ಜಾತ್ರೆಯಲ್ಲಿ ಲಭ್ಯವಿದ್ದವು. ಶಾಲಾ ಮುಂಭಾಗದಲ್ಲಿ ವಿದ್ಯಾರ್ಥಿಗಳು ವ್ಯಾಪಾರ ನಡೆಸಿದರು. ಶಿಕ್ಷಕರು, ಪೋಷಕರು, ಸಾರ್ವಜನಿಕರು ವಿದ್ಯಾರ್ಥಿಗಳೊಂದಿಗೆ ವಸ್ತುಗಳನ್ನು ಖರೀದಿಸಿದ್ದು, ಉತ್ತಮ ಸ್ಪಂದನೆ ದೊರೆತವು.
ಪ್ರಗತಿ ಜಾತ್ರೆಯಲ್ಲಿ ಸುಮಾರು 40ಕ್ಕಿಂತಲೂ ಹೆಚ್ಚು ತಂಡವಾರು ಸ್ಟಾಲ್ ಗಳನ್ನು ಹೊಂದಿದ್ದು, 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯವಹಾರ ನಡೆಸಿದರು. ವಿಶೇಷವಾಗಿ ಭೂತದ ಮನೆ, ತೊಟ್ಟಿಲು ಉಯ್ಯಲೆ, ಕುದುರೆ, ಜೋಕರ್ಸ್, ಲಕ್ಕಿ ಗೇಮ್ ಗಳು, ವಿಭಿನ್ನ ಶೈಲಿಯ ಆಟಗಳು ಮನರಂಜಿಸಿದವು.