ಶ್ರದ್ಧೆ, ಪ್ರಾಮಾಣಿಕ ವ್ಯವಹಾರದಿಂದ ಉದ್ಯಮದಲ್ಲಿ ಯಶಸ್ಸು-ಅರುಣ್ ಕುಮಾರ್ ಪುತ್ತಿಲ
ಬಡಗನ್ನೂರು: ಸಂಪ್ಯ ಅಕ್ಷಯ ಕಾಲೇಜು ಬಳಿ ಇರುವ ಕಾವೇರಿ ಸಂಕೀರ್ಣದಲ್ಲಿ ರತ್ನಮಾನಸ ಎಂಟರ್‌ಪ್ರೈಸಸ್ ಫೆ.19 ರಂದು ಶುಭಾರಂಭಗೊಂಡಿತು.ಬಟ್ರಪ್ಪಾಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.
ಸಂಸ್ಥೆಯನ್ನು ಉದ್ಘಾಟಿಸಿದ ಪತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ನಾವು ಮಾಡುವ ಯಾವುದೇ ಉದ್ಯಮ, ವ್ಯವಹಾರಗಳಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದರೆ ಅಂತಹ ವ್ಯವಹಾರಗಳು ಯಶಸ್ಸು ಹೊಂದಲು ಸಾಧ್ಯವಿದೆ, ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪೈಪೋಟಿಯಿಂದ ಇದ್ದು ಅದಕ್ಕೆ ಹೊಂದಿಕೊಂಡು ನಾವು ವ್ಯವಹಾರ ಮಾಡಬೇಕಾಗುತ್ತದೆ. ಪುತ್ತೂರು ನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಸಂಪ್ಯ ಕೂಡಾ ಇತ್ತೀಚೆಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಇಂತಹ ಉದ್ಯಮಗಳು ಅಭಿವೃದ್ಧಿಗೆ ಪೂರಕವಾಗಿದೆ, ರತ್ನಮಾನಸ ಎಂಟರ್‌ಪ್ರೈಸಸ್ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು ಮಾತನಾಡಿ, ನಗರಸಭಾ ವ್ಯಾಪ್ತಿಗೆ ಹೊಂದಿಕೊಂಡಿರುವ ಸಂಪ್ಯ ಪ್ರದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಕಾಲೇಜು, ವಿವಿಧ ಉದ್ಯಮಗಳು ಕಾರ್ಯಾಚರಿಸುತ್ತಿದೆ, ಇಲ್ಲಿ ಆಸ್ಪತ್ರೆ ಹಾಗೂ ಇತರ ಉದ್ಯಮಗಳು ಪ್ರಾರಂಭಗೊಳ್ಳಲಿದ್ದು ಇದು ಸಂಪ್ಯದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಗಲಿದೆ. ಇಲ್ಲಿ ಶುಭಾರಂಭಗೊಂಡ ರತ್ನಮಾನಸ ಎಂಟರ್‌ಪ್ರೈಸಸ್ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳಗಲಿ ಎಂದು ಹಾರೈಸಿದರು.
ಕಾವೇರಿ ಸಂಕೀರ್ಣದ ಮಾಲಕ ಭೀಮಯ್ಯ ಭಟ್, ಭವಾನಿ ಶಂಕರ್ ರಾವ್ ಮಲ್ಲಮಾರ್, ಉದ್ಯಮಿ ನಿತ್ಯಾನಂದ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.
ರತ್ನಮಾನಸ ಎಂಟರ್‌ಪ್ರೈಸಸ್‌ನ ಮಾಲಕ ಡಿ ಉದಯ ಕುಮಾರ್ ಹಾಗೂ ಯಜ್ಞೇಶ್ ರತ್ನಮಾನಸ ಪಡುಮಲೆ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಮಾತನಾಡಿ ನಮ್ಮಲ್ಲಿ ಸೈಬರ್, ಜೆರಾಕ್ಸ್, ಲೇಮಿನೇಶನ್, ಡಿಟಿಪಿ ಮಾಡಿ ಕೊಡಲಾಗುವುದು.. ಅಲ್ಲದೇ ಐಸ್‌ಕ್ರೀಮ್, ಜ್ಯೂಸ್ ದೊರೆಯುತ್ತದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

ಗಾಯಕ ರಾಮಕೃಷ್ಣ ಕಾಟುಕುಕ್ಕೆ, ಡಾ.ಸತೀಶ್ ರಾವ್ ಬೆಟ್ಟಂಪಾಡಿ, ವಿಟ್ಲ ಶ್ರೀ ದುರ್ಗಾ ಅಟೋ ಮೊಬೈಲ್ ಮಾಲಕ ಹರಿಪ್ರಸಾದ್ ಬೆಟ್ಟಂಪಾಡಿ,ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಗ್ರಾ.ಪಂ ಸದಸ್ಯ ರವಿರಾಜ ರೈ ಸಜಂಕಾಡಿ, ಮಾಜಿ ಸದಸ್ಯ ಪುರಂದರ ರೈ ಕುದ್ಕಾಡಿ ಮತ್ತಿತರ ಹಲವು ಗಣ್ಯರು ಉಪಸ್ಥಿತರಿದ್ದರು.
ನವ್ಯಶ್ರೀ ಸ್ವಾಗತಿಸಿದರು. ರತ್ನಮಾನಸ ಎಂಟರ್‌ಪ್ರೈಸಸ್‌ನ ಮಾಲಕ ಡಿ ಉದಯಕುಮಾರ್ ವಂದಿಸಿದರು.ವಾಣಿಶ್ರೀ ರತ್ನಮಾನಸ, ಸಹನ ರತ್ನಮಾನಸ, ಪಲ್ಲವಿ ಸಹಕರಿಸಿದರು.