ಪುತ್ತೂರು: ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಾಂಗಲ್ಯ ಸರವೊಂದು ಪತ್ತೆಯಾಗಿದ್ದು, ವಾರಿಸುದಾರರಿದ್ದಲ್ಲಿ ಸೂಕ್ತ ಗುರುತು ನೀಡಿ ಸಂಚಾರ ವಿಭಾಗದಿಂದ ಪಡೆಯುವಂತೆ ಕೆಎಸ್ಆರ್ಟಿಸಿ ಸಂಚಾರ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಎಸ್ಆರ್ಟಸಿ ಬಸ್ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಮಾಂಗಲ್ಯ ಸರವೊಂದು ಬಿದ್ದು ಸಿಕ್ಕಿತ್ತು. ಬಿದ್ದು ಸಿಕ್ಕಿದ ಮಾಂಗಲ್ಯ ಸರವನ್ನು ಸಂಸ್ಥೆಯ ಸಂಚಾರ ವಿಭಾಗದಲ್ಲಿ ಭದ್ರತೆಯಿಂದ ಇರಿಸಲಾಗಿದೆ. ವಾರಿಸುದಾರರು ಮಾಂಗಲ್ಯ ಸರದ ಸೂಕ್ತ ಗುರುತು ನೀಡಿ ಸಂಸ್ಥೆಯಿಂದ ಪಡೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಎಸ್ಆರ್ಟಿಸಿ ಸಂಚಾರ ವಿಭಾಗ ಅಧಿಕಾರಿಗಳ ಮೊಬೈಲ್ ಸಂಖ್ಯೆ 9480345542 ಮತ್ತು 9972288218 ಅನ್ನು ಸಂಪರ್ಕಿಸಬಹುದು.