ರಾಮಕ್ಕೆ ರೈಯವರ ಸಾರ್ಥಕ ಬದುಕು- ರಾಕೇಶ್ ರೈ ಕೆಡೆಂಜಿ
ಪುತ್ತೂರು: ನೆಲ್ಯಾಡಿ ಅಮ್ಮುಂಜೆ ದಿ.ನಾರಾಯಣ ರೈಯವರ ಪತ್ನಿ ರಾಮಕ್ಕೆ ರೈಯವರ ಉತ್ತರಕ್ರಿಯೆಯು ಫೆ.20 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯ ನೇತ್ರಾವತಿ ಸಮುದಾಯು ಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.
ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ, ರಾಮಕ್ಕೆ ರೈಯವರು 90 ವರ್ಷಗಳ ಸಾರ್ಥಕ ಬದುಕನ್ನು ಅತ್ಯಂತ ಪ್ರಾಮಾಣಿಕ ನೆಲೆಯಲ್ಲಿ ಕಳೆದು, ಇಂದು ಅಮರರಾಗಿದ್ದಾರೆ. ಅವರು ತಮ್ಮ ಜೀವನದಲ್ಲಿ ಉತ್ತಮ ವ್ಯಕ್ತಿತ್ವದ ಮೂಲಕ ಸಮಾಜ ಮತ್ತು ಕುಟುಂಬದಲ್ಲಿ ಹೆಸರನ್ನು ಪಡೆದಿದ್ದಾರೆ. ಅವರ ಆದರ್ಶದ ಬದುಕು ನಮ್ಮ ಮುಂದಿನ ಪೀಳಿಗೆಗೆ ಅನುಕರಣೀಯವಾಗಬೇಕು ಎಂದು ಹೇಳಿದರು.

ರಾಮಕ್ಕೆ ರೈಯವರ ಮಕ್ಕಳಾದ ಲಕ್ಷ್ಮೀ ರೈ, ಗಣೇಶ್ ರೈ ಸೂಡಿಮುಳ್ಳು, ಸುರೇಶ್ ರೈ ಸೂಡಿಮುಳ್ಳು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಊರ-ಪರವೂರ ಹಿತೈಷಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಂದಾಳುಗಳು ಸೇರಿದಂತೆ ಅನೇಕ ಮಂದಿ ಭಾಗವಹಿಸಿದರು.