ವಿಟ್ಲ: ಹಣ ನೀಡುವಂತೆ ಬೆದರಿಕೆ ಒಡ್ಡಿ, ಬ್ಲ್ಯಾಕ್ ಮೇಲ್ ಮಾಡಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ವ್ಯಕ್ತಿಯೋರ್ವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ ಘಟನೆ ನಡೆದಿದೆ. ಆನಂದ ಸುರುಳಿಮೂಲೆ ಎಂಬವರು ಬಂಟ್ವಾಳ ಕೋರ್ಟ್‌ನಲ್ಲಿ ನ್ಯಾಯವಾದಿ ಶಿವಾನಂದ ವಿಟ್ಲರವರ ಮೂಲಕ ಖಾಸಗಿ ದೂರು ನೀಡಿದ್ದಾರೆ. ದಲಿತ ಸಂಘದ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಮತ್ತು ವಿಟ್ಲದ ನೆಕ್ಕರೆಕಾಡು ನಿವಾಸಿ ಕಮಲ ಎಂಬವರ ಮೇಲೆ ಎಫ್ ಐಆರ್ ದಾಖಲಿಸುವಂತೆ ನ್ಯಾಯಾಲಯ ವಿಟ್ಲ ಠಾಣಾ ಪೊಲೀಸರಿಗೆ ಆದೇಶ ನೀಡಿದೆ.
ಘಟನೆಯೊಂದಕ್ಕೆ ಸಂಬಂಧಿಸಿ ಸೇಸಪ್ಪ ಬೆದ್ರಕಾಡುರವರು ವಿಟ್ಲದ ನೆಕ್ಕರೆಕಾಡು ನಿವಾಸಿ ಕಮಲರವರನ್ನು ಮುಂದಿಟ್ಟುಕೊಂಡು ಹಣ ನೀಡುವಂತೆ ತನಗೆ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿರುವುದಾಗಿ ಆನಂದ ಸುರುಳಿಮೂಲೆ ಖಾಸಗಿ ದೂರಿನಲ್ಲಿ ತಿಳಿಸಿದ್ದರು.