ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇರಿಯರ್ ಗೈಡೆನ್ಸ್ ತರಬೇತಿ ಕಾರ್ಯಕ್ರಮ

0

ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಫೆ.20ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭರತ್ ಎಚ್.ಆರ್ ಮ್ಯಾನೇಜರ್ ಮತ್ತು ತರಬೇತುದಾರರಾಗಿ ಜಯಶ್ರೀ ರವರು ವೃತ್ತಿ ಮಾರ್ಗದರ್ಶನದ ಸಾಧ್ಯತೆಗಳನ್ನು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ರಾಜಲಕ್ಷ್ಮೀ ಎಸ್ ರೈ ವಹಿಸಿ, ವಿದ್ಯಾರ್ಥಿಗಳೆಲ್ಲರೂ ವ್ಯಕ್ತಿ ಮಾರ್ಗದರ್ಶನವನ್ನು ಪಡೆದು ಭವ್ಯ ಭವಿಷ್ಯತ್ತನ್ನು ರೂಪಿಸಿಕೊಳ್ಳಬೇಕೆಂದು ನುಡಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಪ್ರಾಂಶುಪಲ ಶ್ರೀ ಎಂ.ಶೇಷಗಿರಿ, ಐ.ಕ್ಯೂ.ಎಸಿ ಘಟಕದ ಸಂಘಟಕದ ಸಂಘಟಕ, ಉಪನ್ಯಾಸಕಾರದ ಶಿವಪ್ರಸಾದ್.ಕೆ ಆರ್ ಮತ್ತು ಉದ್ಯೋಗಕಾವಕಾಶದ ಸಂಘಟಕ ವೆಂಕಟ್ರಮಣ ಎನ್, ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ಬಿ.ಸಿ.ಎ ವಿಭಾಗದ ಮುಖ್ಯಸ್ಥೆ ಪ್ರತಿಭಾ ಭಟ್ ಕಾರ್ಯಕ್ರಮ ನಿರೂಪಿಸಿ, ಕುಶಿತ ದ್ವಿತೀಯ ಬಿ.ಸಿ.ಎ ಇವರು ಸ್ವಾಗತಿಸಿ,ಲಾವಣ್ಯ ಎನ್.ಯು ತೃತೀಯ ಬಿ.ಸಿ.ಎ ವಂದಿಸಿದರು.

LEAVE A REPLY

Please enter your comment!
Please enter your name here