ಪುತ್ತೂರು: ಎಸ್ವೈಎಸ್ ಮಾಡಾವು ಸರ್ಕಲ್ ವಾರ್ಷಿಕ ಕೌನ್ಸಿಲ್ ಸಭೆ ಕಟ್ಟತ್ತಾರು ಸುನ್ನೀ ಸೆಂಟರ್ನಲ್ಲಿ ಅಧ್ಯಕ್ಷ ಮುನೀರ್ ಹನೀಫಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಹಮ್ಮದ್ ನಸೀರ್ ನಿಝಾಮಿ ಉದ್ಘಾಟಿಸಿ ಮಾತನಾಡಿದರು. ಝೋನ್ ಎಸ್ವೈಎಸ್ ಪ್ರ.ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ಚುನಾವಣಾ ವೀಕ್ಷಕರಾಗಿ ಆಗಮಿಸಿ ಕೌನ್ಸಿಲ್ ಸಭೆ ನಡೆಸಿದರು. ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ಸಾಂಘಿಕ ತರಬೇತಿ ನೀಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಾಡಾವು ಸರ್ಕಲ್ ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ ರವರು ಶುಭ ಹಾರೈಸಿದರು. ಅಬ್ದುಲ್ ಅಝೀಝ್ ಚೆನ್ನಾರ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ನಂತರ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬದ್ರುಲ್ ಮುನೀರ್ ಹನೀಫಿ, ಪ್ರ.ಕಾರ್ಯದರ್ಶಿಯಾಗಿ ಫವಾಝ್ ಕಟ್ಟತ್ತಾರು, ಕೋಶಾಧಿಕಾರಿಯಾಗಿ ಮುಹಮ್ಮದ್ ಕುಂಡಡ್ಕ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಇಬ್ರಾಹಿಂ ಮುಸ್ಲಿಯಾರ್ ಅಮ್ಚಿನಡ್ಕ, ದಅವಾ ಕಾರ್ಯದರ್ಶಿಯಾಗಿ ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ಚೆನ್ನಾರ್, ಸಾಂತ್ವನ ಕಾರ್ಯದರ್ಶಿಯಾಗಿ ಹಂಝ ಅರಿಕ್ಕಿಲ, ಇಸಾಬಾ ಕಾರ್ಯದರ್ಶಿಯಾಗಿ ಇಸ್ಹಾಕ್ ಮಾಡಾವು, ಸಂಘಟನಾ ಕಾರ್ಯದರ್ಶಿಯಾಗಿ ನಾಸಿರ್ ಸಖಾಫಿ ಕಟ್ಟತ್ತಾರು ಆಯ್ಕೆಯಾದರು. ಸದಸ್ಯರುಗಳಾಗಿ ಅಬ್ದುಲ್ ಅಝೀಝ್ ಚೆನ್ನಾರ್, ನಸೀರ್ ನಿಝಾಮಿ ಚೆನ್ನಾರ್, ನಾಸಿರ್ ಎಪಿ ಚೆನ್ನಾರ್, ಹಮೀದ್ ಮಾಡಾವು, ಇಸ್ಮಾಯಿಲ್ ಎಮ್ ಎಸ್ ಅರಿಕ್ಕಿಲ, ಆಸಿಫ್ ಕಟ್ಟತ್ತಾರು, ಶರೀಫ್ ಬಾಯಂಬಾಡಿರವರನ್ನು ಆಯ್ಕೆ ಮಾಡಲಾಯಿತು. ಫವಾಝ್ ಕಟ್ಟತ್ತಾರು ವಂದಿಸಿದರು.